ಬಹಳಷ್ಟು ದಿನಗಳ ಹಿಂದೆಯೇ ಡ್ರೋನ್ ಪ್ರತಾಪ್ ಈ ವೇಸ್ಟ್ ನಿಂದ ಡ್ರೋನ್ ತಯಾರಿಸಿದ್ದಾನೆ ಎಂದಾಗಲೇ ಅನೇಕ ಇಂಜಿನಿಯರ್ಸ್ ಗಳು ನಾವಿಲ್ಲಿ ವರ್ಕ್ ಶಾಪ್ ನಲ್ಲಿ ಹಗಲು ರಾತ್ರಿ ಕಷ್ಟ ಪಡ್ತೀವಿ.. ಈ ವೇಸ್ಟ್ ನಿಂದ ಡ್ರೋನ್ ತಯಾರಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರೂ ಸಹ ಯಾರು ನಂಬಿರಲಿಲ್ಲ.. ಆದರೆ ಮನುಷ್ಯ ಯಾವ ಮಟ್ಟಕ್ಕೆ ಗುಗ್ಗು ಆಗಬಹುದು ಎಂಬುದಕ್ಕೆ ಬಹುಶಃ ನಾವು ನೀವೆಲ್ಲರೇ ನೈಜ್ಯ ಉದಾಹರಣೆ.. ಹೌದು ದಿಗಳಲ್ಲ.. ತಿಂಗಳಲ್ಲ.. ಸತತ ಎರಡು ವರ್ಷದಿಂದ ನಾವೆಲ್ಲಾ ನಂಬಿಕೊಂಡು ಫೇಮಸ್ ಮಾಡಿದ ವ್ಯಕ್ತಿ ಹೇಳಿದ ಅಷ್ಟೂ ಕತೆ ಸುಳ್ಳು ಎಂದು ವರದಿಯಾದಾಗ ಶಾಕ್ ಜೊತೆಗೆ ನಾವೆಂತ ಮೂರ್ಖರು ಅನ್ನೋದು ಗೊತ್ತಾಗತ್ತೆ.. ಇಷ್ಟು ದಿನ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಕೆಲ ವರ್ಷಗಳಿಂದ ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ದೊಡ್ಡ ದೊಡ್ಡ ಮಠದ ಸ್ವಾಮೀಜಿಗಳಿಂದಲೂ ಸಹ ಸನ್ಮಾನ ಸ್ವೀಕರಿಸಿದ ಡ್ರೋನ್ ಪ್ರತಾಪ ಹೇಳಿದ್ದೆಲ್ಲಾ ಬರಿ ಸುಳ್ಳು ಎಂದು ರಾಷ್ಟ್ರೀಯ ಮಟ್ಟದ OPIndia ಪ್ರಕಟಿಸಿದೆ..
ಹೌದು ಈ ಬಗ್ಗೆ OPIndia Fact check ಮೂಲಕ ಸತ್ಯದ ಬೆನ್ನಟ್ಟಿ ಹೋದಾಗ ಈತ ನಮ್ಮೆಲ್ಲರನ್ನು ಗುಗ್ಗು ಮಾಡಿರುವುದು ಬಯಲಾಗಿದೆ.. ಹೌದು ಸಂಪೂರ್ಣ ಮಾಹಿತಿ ನೋಡಿ.. OPIndia ಪ್ರಕಟಿಸಿದ ವರದಿಯ ಆಯ್ದ ಭಾಗ ಕನ್ನಡದಲ್ಲಿದೆ ನೋಡಿ..
ಹೌದು ಡ್ರೋನ್ ಪ್ರತಾಪ್ ಎಂದ ಕೂಡಲೇ ತಾಯಿಯ ತಾಳಿ ಅಡವಿಟ್ಟು ಡ್ರೋನ್ ತಯಾರಿಸಿ ವಿದೇಶಗಳಲ್ಲಿಯೂ ಹೆಸರು ಮಾಡಿದ.. ಹೀಗೆ ಇನ್ನು ಅನೇಕ ವಿಚಾರಗಳು ಒಂದು ಕ್ಷಣ ತಲೆಯಲ್ಲಿ ಬರುತ್ತವೆ.. ನಾವೆಲ್ಲಾ ಯಾವ ಮಟ್ಟಕ್ಕೆ ಆತ ಹೇಳಿರುವ ಸುಳ್ಳನ್ನೆಲ್ಲಾ ನಂಬಿದ್ದೇವೆ ಎಂದರೆ ನಾವೆಂತ ಮೂರ್ಖರು ಎಂದೆನಿಸುವುದರ ಜೊತೆಗೆ ಆತ ಹೇಳಿದ್ದೆಲ್ಲಾ ಸುಳ್ಳಾ ಎಂದೂ ಈಗಲೂ ನಂಬಲು ಕಷ್ಟವಾಗುವುದು.. ಈ ಬಗ್ಗೆ OpIndia ವಾಹಿನಿ ಸಂಪೂರ್ಣ ವಾಗಿ ಆತನ ಬಗ್ಗೆ ಸತ್ಯಗಳನ್ನು ಹೆಕ್ಕಿ ತೆಗೆದು ಪ್ರಕಟಿಸಿದೆ..
ಹೌದು ಡ್ರೋನ್ ಪ್ರತಾಪ್ ಹೇಳುವಂತೆ ಆತ 600 ಡ್ರೋನ್ ಗಳನ್ನು ತಯಾರಿಸಿಯೇ ಇಲ್ಲ. ತಯಾರಿಸಿದ್ದರೆ ಆತನ ಬಳಿ ಆ ಎಲ್ಲಾ ಡ್ರೋನ್ ಗಳ ವೀಡಿಯೋ ಕೂಡ ಇಲ್ಲ.. ಜೊತೆಗೆ ಫೋಟೋಗಳು ಸಹ ಇಲ್ಲ.. ಇನ್ನು ಆತ ಹೇಳಿದಂತೆ ಮಿಕ್ಸಿಯಲ್ಲಿನ ಮೋಟಾರ್ ನಿಂದ ಡ್ರೋನ್ ತಯಾರಿಸಲು ಸಾಧ್ಯವೇ ಇಲ್ಲ.. ಇನ್ನು ಅನೇಕ ಪ್ರಕಟವಾದ ಅಂಶಗಳು ಇಲ್ಲಿವೆ ನೋಡಿ..
87 ದೇಶಗಳು ಆತನಿಗೆ ಕೆಲಸದ ಆಫರ್ ಕೊಟ್ಟಿವೆ ಎಂಬುದು ದೊಡ್ಡ ಸುಳ್ಳು.. ಪ್ರಧಾನಿ ನರೇಂದ್ರ ಮೋದಿ ಅವರು ಡಿಆರ್ ಡಿಓ ದಲ್ಲಿ ಕೆಲಸದ ಆಫರ್ ನೀಡಿದ್ದಾರೆ ಎಂಬುದು ಸುಳ್ಳು.. ಇನ್ನು 2018 ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್‍ಸ್ಟೈನ್ ಗೋಲ್ಡ್ ಮೆಡಲ್.. ಅಂತರಾಷ್ಟ್ರೀಯ ಡ್ರೋನ್ ಎಕ್ಸ್ಪೋ ದಲ್ಲಿ ಗೋಲ್ಡ್ ಮೆಡಲ್.. CeBit ನಲ್ಲಿ ಮೊದಲ ಬಹುಮಾನ ಹಾಗೂ 2017 ರ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ರೋಬೋಟಿಕ್ ಎಕ್ಸಿಬ್ಯುಷನ್ ನಲ್ಲಿ ಚಿನ್ನದ ಪದಕ.. ಹೀಗೆ ಹಲವಾರು ಪ್ರಶಸ್ತಿ ಆತನಿಗೆ ಬಂದಿದೆ ಎಂದು ಹೇಳಿಕೊಂಡಿದ್ದ.. ಆದರೆ ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಈತನ ಹೆಸರಿನಲ್ಲಿ ಆರೀತಿಯ ಯಾವುದೇ ಅಂತರಾಷ್ಟ್ರೀಯ ಪ್ರಶಸ್ತಿ ದಾಖಲಾಗಿಲ್ಲ.. ಜೊತೆಗೆ ceBit ಅನ್ನೋದು ಒಂದು ಕಂಪ್ಯೂಟರ್ ಎಕ್ಸ್ಪೋ.. ಜರ್ಮನಿಯ ಹ್ಯಾನೋವರ್ ನಲ್ಲಿ ನಡೆದಿದೆ.. ಆದರೆ ಆ ಕಾರ್ಯಕ್ರಮದಲ್ಲಿ ಯಾವುದೇ ಪ್ರತ್ಯೇಕವಾದ ಡ್ರೋನ್ ಎಕ್ಸ್ಪೋ ನಡೆದಿಲ್ಲ.. ಆದ್ದರಿಂದ ಆತ ಅದ್ಯಾವ ಎಕ್ಸ್ಪೋ ದಲ್ಲಿ ಭಾಗವಹಿಸಿ ಅದ್ಯಾವ ಮೆಡಲ್ ಪಡೆದುಕೊಂಡನೋ ತಿಳಿದಿಲ್ಲ..
ಇನ್ನು ಬಹುಮುಖ್ಯವಾಗಿ Cebit ನಲ್ಲಿ ವ್ಯಯಕ್ತಿಕವಾಗಿ ಈತನ ಹೆಸರಲ್ಲಿ ಯಾವುದೇ ಬಹುಮಾನವೂ ಇಲ್ಲ.. ಅಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿರುವುದೆಲ್ಲಾ ಮೊಟೋರೋಲಾ, McAcFee ಈ ರೀತಿಯ ಕಂಪನಿಗಳಷ್ಟೇ.. ಯಾವುದೇ ವ್ಯಯಕ್ತಿಕ ಬಹುಮಾನವೂ ಆ ಕಾರ್ಯಕ್ರಮದಲ್ಲಿ ಇರಲಿಲ್ಲ..
ಇದೇ ರೀತಿ ಆತ ಹೇಳಿಕೊಂಡ ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್ ಕೂಡ ಇಲ್ಲ.. ಎಲ್ಲವೂ ಶುದ್ಧ ಸುಳ್ಳಾಗಿದೆ.. ದಾಖಲೆಗಳ ಪ್ರಕಾರ ಸತ್ಯ ಸಂಗತಿ ಎಂದರೆ ಅದು ಪ್ರತಾಪ್ ಎಂಬಾತ 2017 ರಲ್ಲಿ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ರೋಬೋಟ್ ಎಕ್ಸಿಬ್ಯುಷನ್ ನಲ್ಲಿ ಪಾಲ್ಗೊಂಡಿದ್ದ.. ಅದು ಕೂಡ ಆತನ ಕಾಲೇಜಿನ ಉಪನ್ಯಾಸಕರು ಆತನ ಏರ್ ಟಿಕೆಟ್ ಗೆ ಸಹಾಯ ಮಾಡಿದ್ದರು.. ಆ ಎಕ್ಸಿಬುಷ್ಯನ್ ನಲ್ಲಿ ಪ್ರಖ್ಯಾತ ಕಂಪನಿಗಳ ಡ್ರೋನ್ ಗಳನ್ನು ಇಡಲಾಗಿತ್ತು.. ಆದರೆ ಅಲ್ಲಿ ಪ್ರತಾಪ್ ಎಂಬಾತ ಯಾವುದೇ ಡ್ರೋನ್ ಮಾಡಿದ್ದ ದಾಖಲೆಗಳು ಇಲ್ಲ..
ಇನ್ನು ಆತನೇ ಹೇಳುವಂತೆ ಆತ ಬಹಳಷ್ಟು ಮೆಡಲ್ ಗಳನ್ನು ಬಹುಮಾನಗಳನ್ನು ಆತನ ಡ್ರೋನ್ ಗಾಗಿ ಪಡೆದಿದ್ದೇನೆ ಎಂದು.. ಆದರೆ ಆತ ಪ್ರಶಸ್ತಿ ಪಡೆಯುತ್ತಿರುವ ಒಂದು ವೀಡಿಯೋ ಸಹ ಇಲ್ಲ.. ಒಂದು ಫೋಟೋ ಸಹ ಇಲ್ಲ.. ಮೆಡಲ್ ಹಿಡಿದು ಎಲ್ಲಿಯೋ ನಿಂತ ಫೋಟೋ ಇದೆಯಷ್ಟೇ.. ಪ್ರಶಸ್ತಿ ಸ್ವೀಕರಿಸುತ್ತಿರುವ ಯಾವ ಫೋಟೋ ಕೂಡ ಇಲ್ಲ..
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಆತನ ಫೋಟೋಗಳ ಪಕ್ಕ ಇರುವ ಡ್ರೋನ್ ಗಳು ಯಾವುವು ಎಂಬ ಪ್ರಶ್ನೆ ಬರುವುದು ಸಹಜ.. ಇನ್ನು ಕೆಳಗಿನ ಫೋಟೋದಲ್ಲಿ ಆತ ನಿಂತಿರುವುದು ACSL ಎಂಬ ಜಪಾನಿನ ಕಂಪನಿಯ ಡ್ರೋನ್ ಅದು.. ಅದರ ಹೆಸರು PF 1.. ಅದನ್ನು ಪ್ರತಾಪ್ ಹೇಳಿದಂತೆ ಯಾವುದೇ ರೀಸೈಕಲ್ ವಸ್ತುಗಳಿಂದ ಮಾಡಿಲ್ಲ.. ಬದಲಿಗೆ ಎಲ್ಲವೂ ಆ ಕಂಪನಿಯ ಹೊಸ ವಸ್ತುಗಳಿಂದ ಮಾಡಲಾಗಿದೆ.. ಅದನ್ನು ಯಾವುದೋ ಎಕ್ಸಿಬ್ಯುಷನ್ ನಲ್ಲಿ ಇರಿಸಿದಾಗ ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ… ಅದನ್ನು ತಾನೇ ಮಾಡಿರುವಂತೆ ಬಿಂಬಿಸಲಾಗಿದೆ.. ಆ ಫೋಟೋದಲ್ಲಿ ಗಮನಿಸಿದಾಗ ಆ ಡ್ರೋನ್ ಮೇಲೆ ಕಂಪನಿಯ ಸ್ಟಿಕರ್ ಹಾಗೂ ಅಲ್ಲಿಯೇ ಕಂಪನಿಯ ಟೀಶರ್ಟ್ ಧರಿಸಿರುವ ಸಿಬ್ಬಂದಿಯನ್ನೂ ಸಹ ಕಾಣಬಹುದು.. ಮತ್ತೊಂದು ಫೋಟೋದಲ್ಲಿಯೂ ಸಹ ACSL ಕಂಪನಿಯ ಡ್ರೋನ್ ಮುಂದೆಯೇ ತೆಗೆದುಕೊಂಡ ಫೋಟೋ ಇದಾಗಿದೆ..
ಅಷ್ಟೇ ಅಲ್ಲದೆ ಸಂಪಾದಕರೊಬ್ಬರು ACSL ಕಂಪನಿಗೆ ಮೇಲ್ ಮೂಲಕ ಅವರ ಕಂಪನಿಯಲ್ಲಿ ಪ್ರತಾಪ್ ಎಂಬಾತ ಕೆಲಸ ಮಾಡುತ್ತಿದ್ದಾರಾ ಎಂಬುದನ್ನೂ ಸಹ ವಿಚಾರಿಸಿದ್ದಾರೆ.. ಆದರೆ ಅಂತಹ ಯಾವ ವ್ಯಕ್ತಿಯೂ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ.. ಎಂಬ ವಿಚಾರ ತಿಳಿದಿದೆ.. ಆತ ಕೇವಲ ಎಕ್ಸಿಬ್ಯುಷನ್ ನಲ್ಲಿ ಆ ಕಂಪನಿಯ ಡ್ರೋನ್ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ ಅಷ್ಟೇ..
ಇನ್ನು 2019 ರಲ್ಲಿ ಕರ್ನಾಟಕದಲ್ಲಿ ಪ್ರವಾಹವಾದಾಗ ಪ್ರಾತಾಪನ ಡ್ರೋನ್ ಬಳಸಿ ಆಹಾರ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಬಳಸಿ ಸಂತ್ರಸ್ತರಿಗೆ ನೀಡಲಾಗಿದೆ ಎಂದು ಸುದ್ದಿಯಾಗಿತ್ತು.. ಆದರೆ ಇದನ್ನು ಪರಿಶೀಲಿಸಿದಾಗ ಎರಡು ಸತ್ಯ ಹೊರಬಿದ್ದಿದೆ.. ಆತ ಹಿಡಿದಿರುವ ರಿಮೋಟ್ ಕಂಟ್ರೋಲರ್ ಆತ ತಯಾರಿಸಿದ್ದೇ ಅಲ್ಲ.. ಅದನ್ನು ರೀಸೈಕಲ್ ಮಾಡಿದ ವಸ್ತುಗಳಿಂದ ತಯಾರಿಸಲು ಸಾಧ್ಯವೇ ಇಲ್ಲ.. ಅದು Yuneec Typhoon H+ ಡ್ರೋನ್ ನ ST16S ಗ್ರೌಂಡ್ ಸ್ಟೇಷನ್ ಆಗಿದೆ..
ಇನ್ನು ಡ್ರೋನ್ ಗಳಿಂದ ಅಷ್ಟು ಭಾರವಾದ ಅಗತ್ಯ ಸಾಮಾಗ್ರಿಗಳನ್ನು ಸಾಗಿಸಲು ಸಾಧ್ಯವಿಲ್ಲ.. ಸಂತ್ರಸ್ತರಿಗೆ ಬೋಟ್ ಹಾಗೂ ಹೆಲಿಕಾಪ್ಟರ್ ಮೂಲಕವೇ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.. ಇನ್ನು ಡ್ರೋನ್ ಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿರುವವರನ್ನು ಹುಡುಕಲು ಮಾತ್ರ ಸಾಧ್ಯವಾಗುತ್ತದೆ.. ಇದರಿಂದ ತಿಳಿಯುವುದೇನೆಂದರೆ ಈತ Typhoon H+ ಡ್ರೋನ್ ಆಪರೇಟ್ ಮಾಡಲು ಸಿಬ್ಬಂದಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸಿರಬಹುದಾಗಿದೆ..
ಇನ್ನು ಆತ ಎಲ್ಲಾ ಭಾಷಣಗಳಲ್ಲಿ ಹೇಳುವ ಕತೆಯ ಪ್ರಕಾರ ಸುಡಾನ್ ನಲ್ಲಿ 8 ವರ್ಷದ ಬಾಲಕಿಗೆ ಬ್ಲಾಕ್ ಮಂಬಾ ಎಂಬ ಹಾವು ಕಚ್ವಿದಾಗ ಆಕೆಯನ್ನು ರಕ್ಷಣೆ ಮಾಡಲು ಆಕೆಗೆ ಔಷಧಿ ತಲುಪಿಸಲು ನಾನು ತಯಾರಿಸಿದ eagle 2.8 ಡ್ರೋನ್ ಬಳಸಲಾಯಿತು.. ಅದು ಒಂದು ಗಂಟೆಗೆ 280 ಕಿಮೀ ವೇಗದಲ್ಲಿ ಚಲಿಸುತ್ತದೆ.. ರಸ್ತೆಯಲ್ಲಿ ಹೋಗಬೇಕಿದ್ದರೆ 10 ಗಂಟೆ ಸಮಯ ಆಗುತಿತ್ತು ಎಂದು.. ಇದರ ವಾಸ್ತವ ಸಂಗತಿ ನೋಡಿ.. ಆತನೇ ಹೇಳುವಂತೆ ಆ ಬಾಲಕಿ ಇದ್ದ ಜಾಗಕ್ಕೆ ರಸ್ತೆಯಲ್ಲಿ ಹೋಗಬೇಕಾದರೆ 10 ರಿಂದ 11 ಗಂಟೆ ಬೇಕು ಎಂದಿದ್ದನು.. ಅದರಂತೆ ಅಂದಾಜು 400 ರಿಂದ 500 ಕಿಮೀ ದೂರದಲ್ಲಿ ಆಕೆ ಇದ್ದಳೆನ್ನಬಹುದು.. ಇನ್ನು ಇವರ 280 ಕಿಮೀ ಸ್ಪೀಡ್ ನಲ್ಲಿ ಹೋಗುವ ಡ್ರೋನ್ ಬಳಸಿದರೆ 400 ಕಿಮೀ ಹೋಗಬೇಕಾದರೆ 2 ಗಂಟೆ ಸಮಯ ಬೇಕು.. ಆದರೆ ಆ ಹಾವು ಕಚ್ಚಿದರೆ 15 ನಿಮಿಷದಲ್ಲಿ ಜೀವ ಹೋಗುತ್ತದೆ.. ಅದೇಗೆ 8.5 ನಿಮಿಷದಲ್ಲಿ ಈತನ ಡ್ರೋನ್ ಮೂಲಕ ಔಷಧಿ ತಲುಪಿಸಲು ಸಾಧ್ಯವಾಯಿತು ಎಂಬ ಪ್ರಶ್ನೆ ಮೂಡುತ್ತದೆ..
ಆತ ಹೇಳಿದಂತೆ 8.5 ನಿಮಿಷದಲ್ಲಿ 400 ಕಿಮೀ ಕ್ರಮಿಸಬೇಕಾದರೆ 3000 ಕಿಮೀ ಸ್ಪೀಡ್ ನಲ್ಲಿ ಹೋಗಬೇಕು.. ಅದು ಜೆಟ್ ಫೈಟರ್ ನಿಂದ ಮಾತ್ರ ಸಾಧ್ಯ.. ಯಾವುದೇ ರೆಕ್ಕೆ ಬಳಸಿದ ಡ್ರೋನ್ ನಿಂದ ಸಾಧ್ಯವಿಲ್ಲ.. ಜೊತೆಗೆ ಡ್ರೋನ್ ಗಳನ್ನು ಕಂಟ್ರೋಲ್ ಯುನಿಟ್ ಮೂಲಕ ನಿಗಧಿತ ದೂರದ ವರೆಗೆ ಮಾತ್ರ ಕಂಟ್ರೋಲ್ ಮಾಡಲು ಸಾಧ್ಯವಾಗಿರುತ್ತದೆ.. ಅಷ್ಟು ದೂರ ಡ್ರೋನ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಿ ಕಳುಹಿಸಲು ಸಾಧ್ಯವೇ ಇಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.. ಆ ರೀತಿ ಬಹಳಷ್ಟು ದೂರದವರೆಗೆ ಡ್ರೋನ್ ಹೋಗುವುದಾದರೆ ಅವು ಮಿಲಿಟರಿಯ ದೊಡ್ಡ ದೊಡ್ಡ ಡ್ರೋನ್ ಗಳಷ್ಟೇ.. ಅವುಗಳನ್ನು ಎಂಜಿನ್ ಮೂಲಕ ಚಾಲನೆ ಮಾಡಲಾಗುತ್ತದೆ.. ಬ್ಯಾಟರಿ ಮೂಲಕವಲ್ಲ.. ಹಾಗೂ ಅವುಗಳನ್ನು ಸ್ಯಾಟಲೈಟ್ ಮೂಲಕ ಕಂಟ್ರೋಲ್ ಮಾಡಲಾಗುತ್ತದೆ.. ಈ ಹಾವು ಕಚ್ವಿದ ಕತೆ ಸಂಪೂರ್ಣವಾಗಿ ಡ್ರೋನ್ ಪ್ರತಾಪ್ ಅವರು ಸೃಷ್ಟಿಸಿದ ಕತೆಯಾಗಿದೆ..
ಇನ್ನು ಆತ ಹೇಳಿದಂತೆ ತಾನು ಮಿಕ್ಸಿ ಹಾಗೂ ಟಿವಿ ಯ ಬಿಡಿ ಭಾಗಗಳನ್ನು ಬಳಸಿ 600 ಡ್ರೋನ್ ಗಳನ್ನು ಮಾಡಿದ್ದೇನೆ ಎಂದಿದ್ದಾರೆ.. ಮಿಕ್ಸಿಯ ಮೋಟಾರ್ ಬಳಸಿ.. ಹಾಗೂ ಟಿವಿಯ ಚಿಪ್ ಗಳು ಹಾಗೂ ರೆಸಿಸ್ಟರ್ ಗಳನ್ನು ಬಳಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ..
ನಿಜ ಹೇಳಬೇಕು ಎಂದರೆ ಮಿಕ್ಸಿಯಲ್ಲಿ ಬಳಸುವುದು 500 ರಿಂದ 600 ವ್ಯಾಟ್ ನ ಎಸಿ ಮೋಟಾರ್.. ಆದರೆ ಡ್ರೋನ್ ಗಳಲ್ಲಿ ಬಳಸುವುದು ಅತಿ ಕಡಿಮೆ ಪವರ್ ಕನ್ಸಪ್ ಮಾಡುವ ಸಣ್ಣ ಡಿಸಿ ಮೋಟಾರ್ ಅಷ್ಟೇ.. ಅಲ್ಲಿ ಎಸಿ ಟು ಡಿಸಿ ಕನ್ವರ್ಟ್ ಮಾಡಿ ಬಳಸುವುದಾದರೆ ಅದು ಡ್ರೋನ್ ಆಗುವುದಿಲ್ಲ ಹೆವಿ ಎಕ್ವಿಪ್ಮೆಂಟ್ ಆಗಿಬಿಡುತ್ತದೆ. ಇನ್ನೊಂದು ವಿಚಾರ ಎಂದರೆ ಟಿವಿಯಲ್ಲಿ ಬಳಸಿದ ಚಿಪ್ ಗಳಲ್ಲಿ ಕೋಡಿಂಗ್ ಆಗಿರುತ್ತದೆ ಅದನ್ನು ಮತ್ತೊಂದು ಡಿವೈಸ್ ಗೆ ಬಳಸಲು ಸಾಧ್ಯವಿಲ್ಲ.. ಅಷ್ಟೇ ಅಲ್ಲದೆ ಯಾವುದೇ ಇಂಡಸ್ಟ್ರಿ ಸೆಟ್ ಅಪ್ ಇಲ್ಲದೆ 600 ಕ್ಕೂ ಹೆಚ್ಚು ಡ್ರೋನ್ ಗಳನ್ನು ಈ ವೇಸ್ಟ್ ನಿಂದ ತಯಾರಿಸಲು ಸಾಧ್ಯವಿಲ್ಲ.. ತಯಾರಿಸಿದ್ದರೆ ಅದಕ್ಕೆ ಫೋಟೋ ಸಾಕ್ಷಿಯಾಗಲಿ ವೀಡಿಯೋ ಸಾಕ್ಷಿಯಾಗಲಿ ಯಾವುದೂ ಇಲ್ಲ.. ಅಷ್ಟು ಡ್ರೋನ್ ಗಳನ್ನು ಇಂಡಸ್ಟ್ರಿ ಸೆಟ್ ಅಪ್ ಇಲ್ಲದೇ ಈ ವೇಸ್ಟ್ ನಲ್ಲಿಯೇ 600 ಡ್ರೋನ್ ತಯಾರಿಸುವೆ ಎನ್ನುವುದಾದರೆ ಬಹಳಷ್ಟು ವರ್ಷಗಳೇ ಬೇಕಿದೆ.. ಇನ್ನು ಕಾಕತಾಳಿಯವೆಂದರೆ ಆತ ತಯಾರಿಸಿದೆ ಎನ್ನಲಾದ Eagle 2.8 ಡ್ರೋನ್ ಬಹುತೇಕ ದೇಶಕ್ಕೆ ಗೊತ್ತಿರುವ ಡ್ರೋನ್ ಬಾಯ್ ಗುಜರಾತ್ ನ 17 ವರ್ಷದ ಹರ್ಷವರ್ಧನ್ಸಿನ್ ತಯಾರಿಸಿದ Eagle A7 ನಂತೆಯೇ ಇದೆ.. ಈ ಹರ್ಷವರ್ಧನ್ Aerobotics ಕಂಪನಿಯ CEO ಆಗಿದ್ದು ಈತ ಕಂಡುಹಿಡಿದ ಡ್ರೋನ್ ಅದಾಗಿದೆ.. ಆತ ತಯಾರಿಸಿದ ಡ್ರೋನ್ ಗಳ ಸಂಪೂರ್ಣ ವಿವರವೂ ಗೂಗಲ್ ನಲ್ಲಿ ಸಿಗಲಿದೆ.. ಇದೆಲ್ಲವನ್ನು ನೋಡಿದರೆ ಡ್ರೋನ್ ಬಾಯ್ ಹರ್ಷವರ್ಧನ್ ನಿಂದ ಪ್ರತಾಪ್ ಪ್ರೇರಣೆಯಾಗಿ ಈ ರೀತಿ ಕತೆ ಹೆಣೆದಿರಬಹುದಾಗಿದೆ..
ಕೊನೆಗೆ ಪ್ರತಾಪ್ ನ ಸುದ್ದಿಯನ್ನು ನೋಡಿ.. ಈತ ಸೃಷ್ಟಿಸಿದ ಅಷ್ಟೂ ಕತೆಗಳು ಸುಳ್ಳು ಎಂಬುದನ್ನು ತಿಳಿದು.. ವಾಸ್ತವವಾಗಿ ಆತ ಹೇಳಿದಂತೆ ಯಾವುದೇ ಪ್ರಶಸ್ತಿಯೂ ಸಹ ಇಲ್ಲ… ಅಥವಾ ಆತ ಪಡೆದಿದ್ದಕ್ಕೆ ಯಾವ ದಾಖಲೆಯೂ ಇಲ್ಲ.. ಅತಿ ಮುಖ್ಯವಾಗಿ ಆತ ಕಟ್ಟಿದ ಕತೆಯಲ್ಲಿ ಬಹುತೇಕ ಭಾಗವನ್ನು ಮತ್ತೊಬ್ಬ ನಿಜವಾದ ಡ್ರೋನ್ ಬಾಯ್ ಕತೆಯನ್ನೇ ತನ್ನ ಕತೆ ಎಂದು ಹೇಳಿಕೊಂಡಿದ್ದಾನಷ್ಟೇ.. ಇದನ್ನು ನಂಬಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯನ್ನು ನಿಜವೆಂದು ನಮ್ಮನ್ನೂ ಸೇರಿ ಬಹುತೇಕರು ಮೂರ್ಖರಾದೆವು ಅಷ್ಟೇ.. ಎನ್ನುತ್ತಿದ್ದಾರೆ ಜನರು.. ಈಗಾಗಲೇ ನಿಜವಾಗಿ ಡ್ರೋನ್ ಮಾಡುವ ಇಂಜಿನಿಯರ್ಸ್ ಗಳು
ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈತ ಹೇಳುವಷ್ಟು ಸುಲಭವಲ್ಲ ಡ್ರೋನ್ ಮಾಡೋದು ಅಂದ್ರೆ.. ಹಗಲು ರಾತ್ರಿ ಕಷ್ಟ ಪಡ್ತಾ ಇದ್ದೀವಿ.. ಆದರೆ ಸುಮ್ಮನೆ ಇಲ್ಲದನ್ನು ಹೇಳಿಕೊಂಡು ಇಂತವರು ಫೇಮಸ್ ಆಗ್ತಾರೆ.. ಒಂದು ಡ್ರೋನ್ ಮಾಡಲು ತಿಂಗಳುಗಳ ಪರಿಶ್ರಮವಿರುತ್ತದೆ.. ಈತ ಹೇಳಿದಂತೆ 600 ಡ್ರೋನ್ ಮಾಡಲು ಒಂದು ವಾರದಂತೆ ಲೆಕ್ಕ ಹಾಕಿದರೂ ಸಹ 10 ವರ್ಷ ಬೇಕಾಗತ್ತೆ.. ಅದೂ ಸಹ ಎಲ್ಲವನ್ನೂ ಸಹ ಈ ವೇಸ್ಟ್ ನಿಂದಲೇ ಮಾಡಿದ್ದಾರಂತೆ.. ಮಾಡಿದ್ದರೆ ಪ್ರೂಫ್ ತೋರಿಸಲಿ ಎನ್ನುತ್ತಿದ್ದಾರೆ.. ಈ ಬಗ್ಗೆ ಡ್ರೋನ್ ಪ್ರತಾಪ್ ಏನು ಸ್ಪಷ್ಟನೆ ನೀಡುವನೋ ಕಾದು ನೋಡಬೇಕಿದೆ..