ಇದನ್ನು ಗಾಯದ ಕೀವು ಮಾಯುವಿಕೆಗೆ, ಕಫ, ಕೆಮ್ಮು, ಶೀತ ಬಾಧೆಗೂ ಉಪಯೋಗಿಸುತ್ತಾರೆ. ಚಿಟಿಕೆ ಅರಿಶಿನದ ಪುಡಿಯನ್ನು ಬಿಸಿ ಹಾಲಿಗೋ ಇಲ್ಲಾ ನೀರಿಗೋ ಹಾಕಿ ಕುಡಿದರೆ ಗಂಟಲು ನೋವು, ಕೆಮ್ಮು ತಕ್ಕಮಟ್ಟಿಗೆ ವಾಸಿಯಾಗುತ್ತದೆ. ತೇಜಸ್ವಿನಿ ಹೆಗಡೆ, ಬೆಂಗಳೂರು ನಂಜನ್ನು ತೆಗೆಯಲು ಹಾಗೂ ಆರೋಗ್ಯವನ್ನು ವರ್ಧಿಸಲು ಹಸಿ ಅರಿಶಿನ ಕೊಂಬಿನ ಚಟ್ನಿಯನ್ನು ವಿಶೇಷವಾಗಿ ಬಾಣಂತಿಯರಿಗೆ ಮಾಡಿಕೊಡುತ್ತಾರೆ. ಮಾಡಲೂ ಬಲು ಸುಲಭ. ಹೆಚ್ಚಿನ ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ. ಮಾತ್ರವಲ್ಲ ಒಣಗಿದ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೂ ಕೆಡದು. ಈ ಚಟ್ನಿಯ ತಯಾರಿಕೆಗೆ ಹಸಿ ಕೊಂಬನ್ನೇ ಉಪಯೋಗಿಸಬೇಕು. ಒಣಗಿದ ಅರಿಶಿನ ಕೊಂಬನ್ನಾಗಲೀ, ಅರಿಶಿನದ ಪುಡಿಯನ್ನಾಗಲೀ ಬಳಸಿದರೆ ರುಚಿ ಬರದು. ಬೇಕಾಗುವ ಸಾಮಗ್ರಿಗಳು ಹಸಿ ಅರಿಶಿನದ ಕೊಂಬು – ಎರಡು ಹೆಬ್ಬೆರಳಿನ ಗಾತ್ರದಷ್ಟು ತೆಂಗಿನ ಕಾಯಿ – 1/2 ಭಾಗ. ವಿ.ಸೂ : ಬಾಣಂತಿಯರಿಗಾಗಿ ಈ ಚಟ್ನಿಯನ್ನು ತಯಾರಿಸುವಾಗ ಒಣ ಕೊಬ್ಬರಿಯನ್ನು ಹಾಕಿದರೆ ಉತ್ತಮ. ಹಸಿ ತೆಂಗಿನ ತುರಿಯನ್ನು ಬಳಸುವುದು ಅಷ್ಟು ಸೂಕ್ತವಲ್ಲ. ಸಾಸಿವೆ -1/4 ಚಮಚ ತೆಂಗಿನೆಣ್ಣೆ – 2 ಚಮಚ ಕಡ್ಡಿಮೆಣಸು – ಖಾರಕ್ಕೆ ತಕ್ಕಂತೆ ಉಪ್ಪು – ರುಚಿಗೆ ತಕ್ಕಷ್ಟು ಬೆಲ್ಲ – ಸಿಹಿ ನಮಗೆ ಬೇಕಾಗುವಷ್ಟು ಹುಣಸೇ ಹಣ್ಣು – ಎರಡು ದೊಡ್ಡ ಕಡಲೇಕಾಳಿನ ಗಾತ್ರದಷ್ಟು. ಮಾಡುವ ವಿಧಾನ ಮೊದಲಿಗೆ ಹಸಿ ಅರಿಶಿನದ ಕೊಂಬನ್ನು ಚೆನ್ನಾಗಿ ತೊಳೆದು ಬಿಲ್ಲೆಯಾಕಾರದಲ್ಲಿ ಹೆಚ್ಚಿಟ್ಟುಕೊಳ್ಳಬೇಕು.ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಾಸಿವೆ ಹಾಗೂ ಕಡ್ಡಿಮೆಣಸನ್ನು ಹಾಕಿ ಹುರಿಯಬೇಕು. ಸಾಸಿವೆ ಚಟಪಟವೆನ್ನಲು ಅದಕ್ಕೆ ಬಿಲ್ಲೆಯಾಕಾರದ ಅರಿಶಿನದ ಕೊಂಬಿನ ಚೂರುಗಳನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಹುರಿಯಬೇಕು.ನಂತರ ಅದನ್ನು ತಣಿಸಿ ಕಾಯಿತುರಿ, ಉಪ್ಪು ಹಾಗೂ ಹುಳಿಯನ್ನು ಹಾಕಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಮಿಶ್ರಣಕ್ಕೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಇದರೊಳಗಿನ ನೀರಿನಾಂಶಗಳು ಆರಿ, ಗಟ್ಟಿ ಚಟ್ನಿಯಂತೇ ಆಗುವವರೆಗೆ ಅಂದರೆ ಲೇಹದ ತರ ಆದಾಗ ಆರಿಸಿ ತಣಿಸಿ ಒಣಗಿದ ಗಾಳಿಯಾಡದ ಡಬ್ಬದಲ್ಲಿ ತುಂಬಿಡಬೇಕು. ತಿನ್ನಲು ಬಲು ರುಚಿಕರ ಹಗೂ ಆರೋಗ್ಯಕರ ಈ ಚಟ್ನಿಯನ್ನು ಫ್ರಿಜ್‌ನಲ್ಲಿಟ್ಟು ಬೇಕಾದಾಗ ಬಳಸಿದರೆ ವಾರದವರೆಗೂ ರುಚಿಕೆಡದು.
ಅರಿಶಿನ ಒಂದು ಅತ್ಯುತ್ತಮ ನಂಜು ನಿವಾರಕ ಹಾಗೂ ಔಷಧೀಯ
