Latest Posts

ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಹಿಂದಿಕ್ಕಿ ಲೆವಾಂಡೋಸ್ಕಿ ‘ದಿ ಬೆಸ್ಟ್’ ಫಿಫಾ ಆಟಗಾರ

ಜುರಿಚ್: ಜರ್ಮನಿಯ ಫುಟ್ಬಾಲ್ ಆಟಗಾರ ಬಯರ್ನ್ ಮ್ಯೂನಿಚ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋವ್ಸ್ಕಿಯನ್ನು ವರ್ಷದ ಫಿಫಾ ವಿಶ್ವ ಆಟಗಾರ ಎಂದು ಆಯ್ಕೆ ಮಾಡಲಾಗಿದೆ. ಮೂವತ್ತೆರಡು ವರ್ಷದ ಲೆವಾಂಡೋವ್ಸ್ಕಿಯನ್ನು ಕೋವಿಡ್ ಕಾರಣ ವರ್ಚುವಲ್ ಆಗಿ ಆಯೋಜಿಸಿದ್ದ ಸಮಾರಂಭದಲ್ಲಿ ಫಿಫಾ ವರ್ಲ್ಡ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಫೈನಲ್‌ನಲ್ಲಿ ಲೆವಾಂಡೋವ್ಸ್ಕಿ, ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದರು.

13 ವರ್ಷಗಳಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಹೊರತುಪಡಿಸಿ ಫಿಫಾ ಪ್ರಶಸ್ತಿಯನ್ನು ಗೆದ್ದ ಎರಡನೇ ಆಟಗಾರ ಲೆವಾಂಡೋವ್ಸ್ಕಿ. ಇನ್ನೊಬ್ಬರು 2018 ರಲ್ಲಿ ಪ್ರಶಸ್ತಿ ಗೆದ್ದ ಕ್ರೊಯೇಷಿಯಾದ ಲುಕಾ ಮೊಡ್ರಿಕ್.

ಪ್ರಶಸ್ತಿ ವಿಜೇತರನ್ನು ಫಿಫಾ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ತಂಡಗಳ ತರಬೇತುದಾರರು, ನಾಯಕರು ಮತ್ತು ಆಯ್ದ ಪತ್ರಕರ್ತರ ಮತಗಳು (75%) ಮತ್ತು ಅಭಿಮಾನಿ ಬಳಗ (25%) ನಿರ್ಧರಿಸುತ್ತದೆ.

ಈ ವರ್ಷದ ಪ್ರಶಸ್ತಿ 2019 ರ ಜುಲೈ 20 ರಿಂದ 2020 ರ ಅಕ್ಟೋಬರ್ 7 ರವರೆಗಿನ ಪ್ರದರ್ಶನವನ್ನು ಆಧರಿಸಿದೆ. ಈ ಸಮಯದಲ್ಲಿ, ಲೆವಾಂಡೋವ್ಸ್ಕಿ ಬೇಯರ್ನ್ ಪರ 52 ಪಂದ್ಯಗಳಲ್ಲಿ 60 ಗೋಲುಗಳನ್ನು ಗಳಿಸಿದರು. ಆಡಿದ ಪ್ರತಿ 76 ನಿಮಿಷಗಳಿಗೊಮ್ಮೆ ಸರಾಸರಿ ಒಂದು ಗೋಲು. ಕಳೆದ ಋತುವಿನಲ್ಲಿ ಬಯರ್ನ್ ಮ್ಯೂನಿಚ್ ಪರ ಆಡಿದ ಎಲ್ಲಾ ಪ್ರಮುಖ ಚಾಂಪಿಯನ್‌ಶಿಪ್‌ಗಳಲ್ಲಿ ಲೆವಾಂಡೋವ್ಸ್ಕಿ ಅಗ್ರ ಸ್ಕೋರರ್ ಆಗಿದ್ದರು.