2021ನೇ ಸಾಲಿನ ಟಿ 20 ವಿಶ್ವಕಪ್ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ ಈ ನಿರ್ಧಾರವನ್ನು ತಾತ್ವಿಕವಾಗಿ ತೆಗೆದುಕೊಳ್ಳಲಾಗಿದೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಹೇಳಿದರು. ಜೂನ್ 28 ರೊಳಗೆ ಪಂದ್ಯಾವಳಿಯನ್ನು ಘೋಷಿಸುವಂತೆ ಐಸಿಸಿ ಕಳೆದ ಮಂಡಳಿ ಸಭೆಯಲ್ಲಿ ಬಿಸಿಸಿಐಗೆ ಸೂಚಿಸಿತ್ತು.
ಭಾರತದಲ್ಲಿ ಕೋವಿಡ್ ವ್ಯಾಪಕತೆಯಿಂದಾಗಿ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೊದಲು ವಿಶ್ವಕಪ್ ಅನ್ನು ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ನಿಗದಿಪಡಿಸಲಾಗಿತ್ತು . ದಿನಾಂಕದ ಸಂಬಂಧಿಸಿದಂತೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ನೀಡಲಾಗುವುದು ಎಂದು ತಿಳಿದುಬಂದಿದೆ. ವಿಶ್ವಕಪ್ ಭಾರತದಿಂದ ಹೊರಗೆ ಯುಎಇಯಲ್ಲಿ ನಡೆಯುದಾದರೂ , ಬಿಸಿಸಿಐ ಯೇ ನಡೆಸುತ್ತದೆ.
ಟಿ 20 ವಿಶ್ವಕಪ್ ಯುಎಇಯಲ್ಲಿ
ದಿನಾಂಕ ಪ್ರಕಟಿಸಿಲಿರುವ ಐಸಿಸಿ
