Latest Posts

IPL-2020: ಕೆಕೆಆರ್ ಗೆ ಸುಲಭ ಜಯ;ಸನ್ ರೈಸರ್ಸ್ ಗೆ ಎರಡನೇ ಸೋಲು

ದುಬೈ: ಯುಎಇನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ನ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಸನ್ರೈಸರ್ಸ್ ತಂಡ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 143 ರನ್ಗಳ ಗುರಿ ನೀಡಿದ್ರು. ಇನ್ನು ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 18 ಓವರ್ಗಳಲ್ಲಿ 7 ವಿಕೆಟ್ ಅಂತರದಲ್ಲಿ ಗೆಲುವಿನ ನಗೆ ಬೀರಿದೆ.

ನೈಟ್​​ ರೈಡರ್ಸ್​ ಪರ ಶುಭ್​ ಮನ್​ ಗಿಲ್​ ಔಟ್​ ಆಗದೆ 70 ರನ್​ ಗಳಿಸಿದರೆ, ನಿತೀಶ್​​ ರಾಣಾ 26 ಮತ್ತು ಇಯಾನ್​ ಮಾರ್ಗನ್​ ಔಟ್​ ಆಗದೆ 42 ರನ್ ಗಳಿಸಿದ್ರು. ಸನ್​ ರೈಸರ್ಸ್​ ಪರ ಖಲೀಲ್​ ಅಹ್ಮದ್​​, ಟಿ.ನಟರಾಜನ್​ ಮತ್ತು ರಶೀದ್​ ಖಾನ್​ ತಲಾ ಒಂದೊಂದು ವಿಕೆಟ್​ ಕಿತ್ತಿದ್ದಾರೆ.