Latest Posts

2RupeeBhakts ; ಟ್ವೀಟರ್ ನಲ್ಲಿ ಟ್ರೋಲ್ ಗೆ ಒಳಗಾದ ಬಿಜೆಪಿ ಐಟಿ ಸೆಲ್

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ #2RupeeBhakts ಟ್ರೆಂಡ್ ಆಗುತ್ತಿದ್ದು ಬಿಜೆಪಿ ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ತನ್ನ ಮಾನ ಕಳೆದುಕೊಳ್ಳುತ್ತಿದೆ.

ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಕಲಿ ಖಾತೆಗಳನ್ನು ಸೃಷ್ಟಿ ಮಾಡಿಸಿ ಅದಲ್ಲಿ ಹಾಕುವ ಒಂದೊಂದು ಪೋಸ್ಟ್ ಹಾಗೂ ಕಮೆಂಟುಗಳಿಗೆ ಬಿಜೆಪಿಯು ಹಣ ಪಾವತಿ ಮಾಡುತ್ತಿತ್ತು ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಬಿಜೆಪಿ ಐಟಿ ಸೆಲ್‌ ಕಳುಹಿಸಿದ್ದಾರೆ ಎಂದು ಹೇಳಲಾದ ಮೆಸೇಜಿನ ಸ್ಕೀನ್ ಶಾರ್ಟ್ ಹಾಕಿ “ಭಕ್ತರೇ,2 ರೂಪಾಯಿ ಆಸೆಗೆ ಸುಳ್ಳು ಸುದ್ದಿ ಹಬ್ಬಿಸೋದು ಬಿಟ್ಟು ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಹೋಗಿ ದಿನಕ್ಕೆ 275ರೂ ಸಿಗುತ್ತೆ” ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು “18% ಜಿಎಸ್ಟಿ ಕಳೆದು ಪ್ರತಿ ಟ್ವೀಟ್‌ಗೆ ನಿಜವಾದ ಪಾವತಿ ಕೇವಲ 1.64 ರೂ.” ಎಂದು ಒಬ್ಬರು ಪ್ರಧಾನಿ ಮೋದಿಯ ಚಿತ್ರದ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಟ್ವಿಟ್ಟರ್‌ ಟ್ರೆಂಡಿಂಗ್‌ನಲ್ಲಿ #2RupeeBhakts ಅತೀ ಹೆಚ್ಚು ಟ್ರೆಂಡ್ ಆಗುತ್ತಿದ್ದು ಹಲವಾರು ಜನರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದಾರೆ.