ನವದೆಹಲಿ: ಆರ್‌ಎಸ್‌ಎಸ್ ಮುಖಂಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸಾರ್ಹ ರಾಮ್ ಮಾಧವ್ ಸೇರಿದಂತೆ ಹಿರಿಯ ನಾಯಕರನ್ನು ಬಿಜೆಪಿ ನೂತನ ಅಧ್ಯಕ್ಷ ಜೆ.ಪಿ.ನಡ್ಡ ಸೋಮವಾರ ವಜಾ ಮಾಡಿದ್ದಾರೆ.ಪಕ್ಷದ ರಾಷ್ಟ್ರೀಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಲವು ತಿಂಗಳುಗಳ ನಂತರ ಪಕ್ಷದಲ್ಲಿ ಕೆಲವು ಆಂತರಿಕ ಬದಲಾವಣೆ ಮಾಡಲು ಮುಂದಾಗಿದ್ದಾರೆ.ರಾಮ್ ಮಾಧವ್ ಅವರಲ್ಲದೆ ಮುರಾಲೀಧರ್ ರಾವ್, ಸರೋಜ್ ಪಾಂಡೆ ಮತ್ತು ಅನಿಲ್ ಜೈನ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿದೆ.ಅಮಿತ್ ಷಾ ಅವರ ನಿಷ್ಠಾವಂತ ರಾಮ್ ಮಾಧವ್ ಅವರನ್ನು ಪ್ರಮುಖ ನಿರ್ಧಾರಗಳಿಗೆ ಹಿನ್ನಡೆ ಉಂಟುಮಾಡಬಹುದು ಎಂದು ಸಮಿತಿಯಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಮುಕುಲ್ ರಾಯ್, ಅನ್ನಪೂರ್ಣ ದೇವಿ ಮತ್ತು ಬೈಜಂತ್ ಜೈ ಪಾಂಡ ಅವರು ಪಕ್ಷದ ಹೊಸ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಸದಾ ವಿವಾದದಲ್ಲಿರುವ ಕರ್ನಾಟಕದ ಯುವ ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾದ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.ಸಿ.ಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿ ಅಚ್ಚರಿ ಮೂಡಿಸಿದ್ದಾರೆ.