Latest Posts

ಸೌದಿ ಅರೇಬಿಯಾ: ರೋಗಮುಕ್ತಿ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ; ಇಂದು 2692 ಹೊಸ ಪ್ರಕರಣಗಳು, 7718 ರೋಗಮುಕ್ತಿ, 40 ಬಲಿ

ಸೌದಿ ಅರೇಬಿಯಾ: ರೋಗಮುಕ್ತಿ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ; ಇಂದು 2692 ಹೊಸ ಪ್ರಕರಣಗಳು, 7718 ರೋಗಮುಕ್ತಿ, 40 ಬಲಿ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 2692 ಹೊಸ ಕೊವಿಡ್ ಪ್ರಕರಣಗಳು 7718 ರೋಗಮುಕ್ತಿ ದಾಖಲಾಗಿದೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 237803 ಹಾಗೂ ರೋಗ ಮುಕ್ತಿ ಸಂಖ್ಯೆ 177560 ಕ್ಕೆ ಏರಿಕೆಯಾಗಿದೆ. ಇಂದು 40 ಬಲಿಗಳು ದಾಖಲಾಗುವುದರೊಂದಿಗೆ ಒಟ್ಟು ಕೊವಿಡ್ ಬಲಿಗಳ ಸಂಖ್ಯೆ 2283ಕ್ಕೆ ಏರಿಕೆಯಾಗಿದೆ.