Latest Posts

ಸೌದಿ ಅರೇಬಿಯಾ: ತೆರೆದ ಮೈದಾನಗಳಲ್ಲಿ ಈದ್ ಪ್ರಾರ್ಥನೆಗೆ ಅವಕಾಶವಿಲ್ಲ.


ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರ, ಕರೆ ಮತ್ತು ಮಾರ್ಗದರ್ಶನ ಸಚಿವ ಅಲ್-ಶೇಖ್ ‘ ಈದ್ ಅಲ್-ಅಧಾ ಪ್ರಾರ್ಥನೆಗಳನ್ನು ಮಸೀದಿಗಳಲ್ಲಿ ಮಾತ್ರ ನಿರ್ವಹಿಸಲಾಗುವುದು ಹೊರತು ಯಾವುದೇ ತೆರೆದ ಮೈದಾನದಲ್ಲಿ ನಮಾಝ್ ನಿರ್ವಹಿಸಲು ಅವಕಾಶವಿಲ್ಲ ಎಂದು ಸೋಮವಾರ ಘೋಷಿಸಿದರು. ಈದ್ ಅಲ್-ಅಧಾ ಪ್ರಾರ್ಥನೆಗಳನ್ನು
ಸೌದಿಯಾದ್ಯಂತ ಎಲ್ಲಾ ಪ್ರದೇಶಗಳಲ್ಲಿನ ಸಚಿವಾಲಯದ ಶಾಖೆಗಳಿಗೆ ಕಳುಹಿಸಲಾದ ಸುತ್ತೋಲೆಯಲ್ಲಿ, ದೊಡ್ಡ ಮಸೀದಿಗಳು ಮತ್ತು ಹೆಚ್ಚುವರಿ ಮಸೀದಿಗಳ ಒಳಗೆ ಈದ್ ಪ್ರಾರ್ಥನೆಯನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಈ ಸನ್ನಿವೇಶದಲ್ಲಿ ಯಾವುದೇ ಈದ್ ಪ್ರಾರ್ಥನೆಯನ್ನು ತೆರೆದ ಮೈದಾನದಲ್ಲಿ ನೀಡಬಾರದು ಎಂದು ಸಚಿವರು ನಿರ್ದೇಶನ ನೀಡಿದರು . ಆರೋಗ್ಯಾಧಿಕಾರಿಗಳು ಹೊರಡಿಸಿದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪ್ರೋಟೋಕಾಲ್‌ಗಳನ್ನು ಪಾಲಿಸುವ ಮೂಲಕ ಈದ್ ಪ್ರಾರ್ಥನೆ ನಿರ್ವಹಿಸಲು ಸಚಿವಾಲಯ ಕರೆ ನೀಡಿದೆ.