Latest Posts

ನಾವು ಫೆಲಸ್ತೀನಿಯರ ಹಕ್ಕುಗಳೊಂದಿಗೆ – ಸೌದಿ ಸ್ಪಷ್ಟನೆ

ರಿಯಾದ್: ಸೌದಿ ಅರೇಬಿಯಾ ಯಾವಾಗಲೂ ಪ್ಯಾಲೇಸ್ತೀನಿಯರ ಹಕ್ಕುಗಳೊಂದಿಗೆ ಇರುತ್ತದೆ ಎಂದು ರಾಜ ಸಲ್ಮಾನ್ ಹೇಳಿದ್ದಾರೆ.ಜೆರುಸಲೆಮ್ ರಾಜಧಾನಿ ಆಗಿರುವ  ಸ್ವತಂತ್ರ ಫೆಲಸ್ತೀನ್ ರಾಷ್ಟ್ರ ನಮ್ಮ ಕನಸಾಗಿದ್ದು ಅದನ್ನು ನನಸಾಗಿಸುವ ಕೆಲಸವನ್ನು ಸೌದಿ ಮುಂದುವರಿಸಲಿದೆ. ಮಧ್ಯಪ್ರಾಚ್ಯದ ಎಲ್ಲಾ ಶಾಂತಿ ಪ್ರಯತ್ನಗಳಿಗೆ ಸೌದಿ ಅರೇಬಿಯಾ ಬೆಂಬಲ ನೀಡಲಿದೆ ಎಂದು ಕಿಂಗ್ ಸಲ್ಮಾನ್ ಹೇಳಿದರು.

1981 ರಿಂದ ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಶಾಂತಿ ಯೋಜನೆಗಳನ್ನು ಸೌದಿ ಅರೇಬಿಯಾ ಮುಂದಿಟ್ಟಿದೆ.  ಜೆರುಸಲೆಮ್ ಸೇರಿರುವ ಸ್ವತಂತ್ರ ರಾಜ್ಯ ಸ್ಥಾಪನೆ ಸೇರಿದಂತೆ ಪ್ಯಾಲೆಸ್ತೀನಿಯರ ಹಕ್ಕುಗಳನ್ನು ಸಂರಕ್ಷಿಸಲಾಗುವುದು. ಅದರಂತೆ, ಅರಬ್-ಇಸ್ರೇಲಿ ಸಂಘರ್ಷವನ್ನು ಪರಿಹರಿಸುವ ಬಗ್ಗೆ ಯೋಜನೆಯನ್ನು ರೂಪಿಸಲಾಗುವುದು.

ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಯುಎಸ್ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಸೌದಿ ಅರೇಬಿಯಾ ಬೆಂಬಲಿಸುತ್ತದೆ ಎಂದು ರಾಜ ಸಲ್ಮಾನ್ ಹೇಳಿದ್ದಾರೆ.