Latest Posts

ಯುಎಇ ಯಲ್ಲಿರುವ ಅನಿವಾಸಿ ಭಾರತೀಯರು ತಾಯ್ನಾಡಿಗೆ ಎಷ್ಟು ಪ್ರಮಾಣದ ಚಿನ್ನವನ್ನು ಕೊಂಡುಹೋಗಬಹುದು?

ಕಷ್ಟಮ್ಸ್ ನಿಯಮಗಳ ಪ್ರಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರುವ ಭಾರತೀಯ ಪುರುಷ ಪ್ರಯಾಣಿಕರಿಗೆ ಸುಮಾರು ಐವತ್ತು ಸಾವಿರ (2,472 ದಿರ್ಹಂ) ಮೌಲ್ಯದ ಆಭರಣಗಳನ್ನು ಸಾಗಿಸಲು ಅನುಮತಿ ಇದೆ.
ಹಾಗೆಯೇ ಮಹಿಳಾ ಪ್ರಯಾಣಿಕರು ಒಂದು ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಸಾಗಿಸಬಹುದು ಎಂದು ಮಲಬಾರ್ ಚೇರ್ಮಾನ್ MP ಅಹಮದ್ ರವರು ವಿವರಿಸಿದರು.

ಸಿ.ಟಿ ಆಫ್ ಗೋಲ್ಡ್ ಎಂದು ಕರೆಯಲ್ಪಡುವ ದುಬೈ ಯಲ್ಲಿ ಸುಮಾರು 3.5 ಮಿಲಿಯನ್ ಅನಿವಾಸಿ ಭಾರತೀಯರು ವಾಸಿಸುತಿದ್ದಾರೆ,ಭಾರತದಿಂದ ಯುಎಇ ಗೆ ಬೇಟಿ ನೀಡುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ.

ವಿಶ್ವದಲ್ಲೇ ಅತ್ಯಂತ ಹೆಚ್ಚಾಗಿ ಚಿನ್ನ ಖರೀದಿಸುವ ರಾಷ್ಟ್ರದಲ್ಲಿ ಭಾರತವು ಕಳೆದ ವಾರದಲ್ಲಿ ಆಭರಣಗಳು ಹಾಗೂ ಮೌಲ್ಯಾಧಾರಿತ ವಸ್ತುಗಳ ಮೇಲೆ ಹಾಲ್ಮಾರ್ಕ್ ಹಾಕುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ನವ ದೆಹಲಿಯ ಈ ನಿಯಮದಿಂದ
ಕಲಬೆರಕೆಯ ಕಾರಣದಿಂದ ನಕಲಿ ಆಭರಣಗಳಿಂದ ಜನರು ಮೋಸಹೋಗುವುದನ್ನು ತಪ್ಪಿಸಲು, ಆಭರಣಗಳಲ್ಲಿ ಭಾರತದಲ್ಲಿ ಜಾಗತಿಕ ಮಾರುಕಟ್ಟೆ ನಿರ್ಮಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ,
ಚಿನ್ನ ತಯಾರಿಕರಿಗೆ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಈ ಕಾನೂನು ಅನ್ವಯವಾಗಲಿದೆ ಎಂದು ಅಹಮದ್ ರವರು ವಿವರಿಸಿದರು.