Latest Posts

ನವೆಂಬರ್ 12ಕ್ಕೆ ದುಬೈಯಲ್ಲಿ ವಿಖಾಯ ಕರ್ನಾಟಕ ಬೃಹತ್ ರಕ್ತದಾನ ಶಿಬಿರ

ದುಬೈ: SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಪ್ರತೀ ವರ್ಷ ಹಮ್ಮಿಕೊಂಡು ಬರುತ್ತಿರುವ ಬೃಹತ್ ರಕ್ತದಾನ ಶಿಬಿರ ಇದೇ ಬರುವ ಶುಕ್ರವಾರ ದಿನಾಂಕ 12-11-2021 ಮಧ್ಯಾಹ್ನ 1:30ರಿಂದ ಸಂಜೆ 6 ಘಂಟೆ ತನಕ ದುಬೈ ಊದ್ ಮೆಥ್ಥದಲ್ಲಿರುವ ಲತೀಫ ಹಾಸ್ಪಿಟಲ್ ರಕ್ತದಾನ ಕೇಂದ್ರದಲ್ಲಿ ನಡೆಸಲು ತೀರ್ಮಾನಿಸಿದ್ದು, ಈ ಬೃಹತ್ ಶಿಬಿರದಲ್ಲಿ ಅನಿವಾಸಿ ಕರ್ನಾಟಕದ ಸಂಪನ್ಮೂಲ ವ್ಯಕ್ತಿಗಳು, ರಕ್ತದಾನಿಗಳು ಭಾಗವಹಿಸಲಿದ್ದಾರೆ ಎಂದು SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ಕೋಶಾಧಿಕಾರಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್, ವಿಖಾಯ ಕರ್ನಾಟಕ ಯುಎಇ ರಕ್ತದಾನ ಶಿಬಿರ ಉಸ್ತುವಾರಿ ಜನಾಬ್ ಜಲೀಲ್ ಶಾನ್ ವಿಟ್ಲ, ಜಲೀಲ್ ಉಕ್ಕುಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಜೀವದಾನ ಸಾಮಾಜಿಕ ಸೇವೆಗೆ ಉಚಿತ ಸಾರಿಗೆ ವ್ಯವಸ್ಥೆ ಏರ್ಪಡಿಸಿದ್ದು, ಸಹೃದಯಿ ಅನಿವಾಸಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಗೈದು ಸಹಕರಿಸಬೇಕಾಗಿ ಕೋರಿರುತ್ತಾರೆ.

ಹೆಚ್ಚಿನ ಮಾಹಿತಿ ಮತ್ತು ವಾಹನದ ವ್ಯವಸ್ಥೆಗೆ ಸಂಪರ್ಕಿಸಬೇಕಾದ ಸಂಖ್ಯೆ: 055-5091955, 055-4047903, 056-5812108