Latest Posts

ರೈಸಿಂಗ್ ಸ್ಟಾರ್ ದುಬೈ ಇದರ  ವತಿಯಿಂದ ಶಾರ್ಜಾದಲ್ಲಿ
“ಸದಸ್ಯರ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ

ಶಾರ್ಜಾ: ರೈಸಿಂಗ್ ಸ್ಟಾರ್ ದುಬೈ ಇದರ  ವತಿಯಿಂದ ಶಾರ್ಜಾದಲ್ಲಿ ತಂಡದ
“ಸದಸ್ಯರ ಸ್ನೇಹ ಸಮ್ಮಿಲನ  ಮತ್ತು ಕ್ರೀಡಾಕೂಟ -2021 ಅದ್ದೂರಿಯಾಗಿ ನಡೆಯಿತು.

ಕ್ರೀಡಾಕೂಟದ ಪ್ರಯುಕ್ತ ಕ್ರಿಕೆಟ್, ಲಗೋರಿ, ಓಟ ಸ್ಪರ್ಧೆ, ರಿಲೇ, ಹಗ್ಗ ಜಗ್ಗಾಟ ಇತ್ಯಾದಿ ಕ್ರೀಡೆಗಳನ್ನು ನಡೆಸಲಾಯಿತು.

ನಾಲ್ಕು ತಂಡಗಳೊಂದಿಗೆ ತೀವ್ರ ಪೈಪೋಟೋಯಿಂದ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ರೈಸಿಂಗ್   ಚಾಲೆಂಜರ್ಸ್ ಮತ್ತು ರೈಸಿಂಗ್ ಕ್ಯಾಪಿಟಲ್ ಫೈನಲ್ ಪ್ರವೇಶಿಸಿದವು, ಅತ್ಯಂತ ಕುತೂಹಲ ಮೂಡಿಸಿದ್ದ  ಫೈನಲ್ ಪಂದ್ಯಾಟದಲ್ಲಿ ರೈಸಿಂಗ್ ಕ್ಯಾಪಿಟಲ್ ನ್ನು ಮಣಿಸಿ ರೈಸಿಂಗ್ ಚಾಲೆಂಜರ್ಸ್  ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಚಾಕಿ ಚಾಲೆಂಜರ್ಸ್ ತಂಡದ ಕಪ್ತಾನರಾಗಿಯೂ, ಇಜ್ಜ ಕ್ಯಾಪಿಟಲ್ ತಂಡದ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು.

ನಂತರ ನಡೆದ ರಿಲೇ ಸ್ಪರ್ಧೆಯಲ್ಲಿ ನಝೀರ್ ಮತ್ತು ಬಳಗ ಮೊದಲ ಸ್ಥಾನವನ್ನು ಪಡೆದುಕೊಂಡರು, ಹಗ್ಗ-ಜಗ್ಗಾಟದಲ್ಲಿ ಸಮದ್ ಮತ್ತು ತಂಡ ಜಯಗಳಿಸಿದರು. ಇದರ ಜೊತೆಗೆ ನೂರು ಮತ್ತು ಇನ್ನೂರು ಮೀಟರ್ ಓಟ ಸ್ಪರ್ಧೆಯೂ ನಡೆಯಿತು.

ಪಂದ್ಯಕೂಟದ ಪ್ರಾಯೋಜಕರಾಗಿ ರೈಸಿಂಗ್ ಸ್ಟಾರ್ ತಂಡದ ಎಲ್ಲಾ ಸಧಸ್ಯರು ಭಾಗವಹಿಸಿದ್ದರು, ಸಂಜೆ ಒಳಾಂಗಣ ಕ್ರೀಡಾಕೂಟ ನಡೆಯಿತು. ನಂತರ ವಿಜಯಿಗಳಿಗೆ ಬಹುಮಾನ ವಿತರಣೆ ಮತ್ತು ಗಣ್ಯ ಅತಿಥಿಗಳೊಂದಿಗೆ  ಸಮಾರೋಪ ಸಮಾರಂಭ ನಡೆಯಿತು.