ಯುಎಇ: ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಸದಸ್ಯರು, ಹಲವು ಸಂಘ ಸಂಸ್ಥೆಗಳ ಸಕ್ರೀಯ ನೇತಾರರಾದ ಜನಾಬ್ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಹೃಶ್ವ ಸಂದರ್ಶನಾರ್ತ ಯುಎಇ ಆಗಮಿಸಿದ್ದು, ಅವರನ್ನು SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ ವತಿಯಿಂದ ದಿನಾಂಕ 1.4.2022 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಬೈ ಟೀಫೀ ಹೋಟೆಲ್ ನಲ್ಲಿ ಸನ್ಮಾನಿಲಾಯಿತು.

SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲೀ ತಂಙಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಟ್ರೆಂಡ್ ಚಯರ್ ಮೇನ್ ಜನಾಬ್ ನೂರ್ ಮುಹಮ್ಮದ್ ನೀರ್ಕಜೆ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ ಇದರ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರು ಮಾತನಾಡಿ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಸಾಮಾಜಿಕ ದೂರದೃಷ್ಟಿ ಮತ್ತು ಜವಾಬ್ದಾರಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಗುರುತಿಸಿದ್ದಾರೆ, ಅವರ ನೇತೃತ್ವದ ಸಾಮಾಜಿಕ ಸೇವೆಗಳು ಮತ್ತು ಮುಸ್ಲಿಮರ ವಿಧ್ಯಾಭ್ಯಾಸಕ್ಕೆ ಮುತುವರ್ಜಿ ವಹಿಸಿ ಅವರ ನೇತೃತ್ವದಲ್ಲಿ ನಡೆಯುವ ಕೆಲಸ ಕಾರ್ಯಗಳು ಪ್ರಶಂಸನೀಯವಾದುದು, ಇನ್ನಷ್ಟು ಸಾಮಾಜಿಕ ಕೆಲಸಗಳೊಂದಿಗೆ ಮುಂದೆ ಸಾಗಲು ಸರ್ವಶಕ್ತನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಶುಭಹಾರೈಸಿದರು.

ಸನ್ಮಾನ ಸ್ವೀಕರಿಸಿದ ಜನಾಬ್ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಮಾತನಾಡಿ ನಮ್ಮ ಕೆಲಸ ಕಾರ್ಯಗಳೆರ್ಲವೂ ಸಮುದಾಯದ ಧಾರ್ಮಿಕ, ಲೌಕಿಕ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಾಗಿ ಅದರ ಮೂಲಕ ಅಲ್ಲಾಹನ ಸಂಪ್ರೀತಿಗಾಗಿ ಎಂದು ಹೇಳಿದರು. ಸಮಸ್ತ ಉಲೆಮಾಗಳ ಜೀವನ ಚರ್ಯೆ ಅನುಸರಿಸಬೇಕು ಅದು ನಮ್ಮ ಮಕ್ಕಳಿಗೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಹೇಳುತ್ತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಅಸ್ಕರ್ ಅಲೀ ತಂಙಲ್ ಅವರು ಮಾತನಾಡಿ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಜನಾಬ್ ಫರ್ವಿಝ್ ಗೂಡಿನಬಲಿ, ಸಮಿತಿಯ ಪದಾಧಿಕಾರಿಗಳಾದ ಅಬ್ದುಲ್ ಸಲಾಂ ಬಪ್ಪಲಿಗೆ, ನವಾಝ್ ಬಿ ಸಿ ರೋಡ್, ನಾಸಿರ್ ಬಪ್ಪಲಿಗೆ, ಸಿರಾಜ್ ಬಿ ಸಿ ರೋಡ್, ಅಝೀಝ್ ಸೋಂಪಾಡಿ, ಅಝರ್ ಹಂಡೇಲು, ಜಾಬಿರ್ ಬೆಟ್ಟಂಪಾಡಿ,ಜಾಬಿರ್ ಬಪ್ಪಲಿಗೆ, ಇಶಾಕ್ ಕುಡ್ತಮುಗೇರು ಮೊದಲಾದವರು ಭಾಗವಹಿಸಿದ್ದರು.