Latest Posts

ಕತಾರ್ ನ ಮೊತ್ತ ಮೊದಲ ಪತ್ರಿಕೆಗಳಲ್ಲೊಂದಾದ ಅಲ್-ಅರಬ್ ಪತ್ರಿಕೆಯ ಯುಗಾಂತ್ಯ 

ಕತಾರ್: ಮೊತ್ತ ಮೊದಲ ಪತ್ರಿಕೆಗಳಲ್ಲೊಂದಾದ ಅಲ್-ಅರಬ್ ಪತ್ರಿಕೆಯ ಯುಗಾಂತ್ಯ… 

     ಖತಾರ್ ದೇಶದ ಸ್ವಾತಂತ್ರದ ನಂತರ 1972ರಲ್ಲಿ ಈ ಪತ್ರವು ಸ್ಥಾಪಿತವಾಗಿತ್ತು.
      Covid-19:ಕೊರೋನಾದಿಂದ ಉಂಟಾದ  ಕಷ್ಟ ನಷ್ಟಗಳಲ್ಲಿ ಮಾಧ್ಯಮ ರಂಗದಲ್ಲಿ ಸಂಭವಿಸಿದ ಮೊದಲ ಬಲಿಯಿದು,
   ಮಹಾಮಾರಿಯಿಂದಾಗಿ ಅರ್ಥ ವ್ಯವಸ್ಥೆಯಲ್ಲಿನ ಏರು ಪೇರು ಮತ್ತು ಜಾಹೀರಾತುದಾರರ ಕೊರತೆಯೇ ಈ ಪತ್ರದ ಅವನತಿಗೆ ಕಾರಣವಾಯಿತು
    ಸಂಸ್ಥೆಯ 120 ಕಾರ್ಮಿಕರನ್ನೂ ಕೈಬಿಟ್ಟಿರುವುದಾಗಿ ನೋಟೀಸ್ ಲಭಿಸಿರುವ ವಿವರಣೆಯನ್ನು ಪ್ರಮುಖ ಆನ್ಲೈನ್ ವಾರ್ತಾ ವಾಹಿನಿಯು ರಿಪೋರ್ಟ್ ಮಾಡಿದೆ, ಸಂಸ್ಥೆಯಲ್ಲಿನ ದುಡಿಯುತ್ತಿದ್ದ ಕಾರ್ಮಿಕರಲ್ಲಿ ಶೇಕಡಾ 70%ರಷ್ಟು ಅನಿವಾಸಿಗಳಾಗಿದ್ದಾರೆ…

     ಸರಿಸುಮಾರು 50 ವರ್ಷಗಳ ಹಿಂದೆ ಖತರಿನ ಅಬ್ದುಲ್ಲಾ ಹುಸೈನ್ ನೈಮ ಎಂಬವರಾಗಿದ್ದರು ಅಲ್ ಅರಬ್ ಪತ್ರಿಕೆಯ ಸ್ಥಾಪಕರು.
ಶಕ್ತವಾದ ಅಭಿಪ್ರಾಯಗಳೊಂದಿಗೆ ಅರಬ್ ಮಾಧ್ಯಮ ಲೋಕದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದರು ನೈಮ. ಇಂದು ಮುನ್ನಡೆಸುತ್ತಿದ್ದ ಅಬ್ದುಲ್ಲಾ ಅಲ್ ಅತ್-ಹಾಬು ಅವರು ಸಹ ಅರಬ್ ದೇಶಗಳಲ್ಲಿ ನಡೆಯುವ ಅರಾಜಕತೆಯ ವಿರುದ್ಧ ಶಕ್ತವಾಗಿ ಧ್ವನಿಯೆತ್ತಿ ಜನರ ಮನಸ್ಸು ಗೆದ್ದಿದ್ದರು.
   ಅಲ್ ಅರಬ್ ಕೊನೆಗೊಳಿಸುತ್ತಿರುವುದು ಇದೇ ಮೊದಲಲ್ಲ,  1996 ರಲ್ಲಿ ಸಂಸ್ಥೆಯನ್ನು ತಾತ್ಕಾಲಿಕವಾಗಿ  ನಿಲ್ಲಿಸಲಾಗಿತ್ತು, ನಂತರ 2007 ನವೆಂಬರಿನಲ್ಲಿ ಪುನರಾರಂಭಿಸಿದ್ದರು.
ಅಂದಿನ ಪ್ರಧಾನಮಂತ್ರಿ ಶೇಖ್ ಅಹ್ಮದ್ ಬಿನ್ ಜಾಸಿಂ ಅಲ್ತಾನಿಯ ನೇತೃತ್ವವು  ಒಂದು ಬಾರಿ ಲಭಿಸಿದ್ದರೂ, ಮೊದಲೇ ಸ್ವಂತಂತ್ರ ಅಭಿಪ್ರಾಯ ಬಿತ್ತರಿಸುವ ಪಾತ್ರವಾಗಿಯೇ ಅಲ್ ಅರಬ್ ಹೆಸರುವಾಸಿಯಾಗಿತ್ತು.
  ಖತರಿನ ಇನ್ನೂ ಹಲವು ಪತ್ರಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿ ಮೂರು ತಿಂಗಳು ಪ್ರಕಟಿಸಲು ಸಾಧ್ಯವಾಗಿರಲಿಲ್ಲ, ಅಲ್ ಶರ್ಕ್, ಗಲ್ಫ್ ನ್ಯೂಸ್, ಖತಾರ್ ಟ್ರಿಬ್ಯುನ್ ನಂತಹಪ್ರಮುಖ  ಪತ್ರಗಳು ಕಳೆದ ವಾರವಷ್ಟೇ ಪುನರಾರಂಭಿಸಿದ್ದರು.