Latest Posts

ಜೋ ಬೆಡೆನ್ ಗೆದ್ದರೆ ಅಮೇರಿಕಾ ಚೀನಾದ ನಿಯಂತ್ರಣದಲ್ಲಿರಲಿದೆ ಎಂದು ಟೀಕಿಸಿದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೆಡೆನ್ ಅವರನ್ನು 2020 ರ ರಾಷ್ಟ್ರೀಯ ನೀತಿ ಮಂಡಳಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕಟುವಾಗಿ ಟೀಕಿಸಿದ್ದಾರೆ.
ನವೆಂಬರ್ 3 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೆಡೆನ್ ಗೆದ್ದರೆ, ನಂತರ ಅಮೆರಿಕವನ್ನು ಚೀನಾ ತನ್ನ ಹಿಡಿತದಲ್ಲಿಡುತ್ತದೆ ಎಂದು ಟ್ರಂಪ್ ಮಾತಿನ ನಡುವೆ ಅಮೇರಿಕ ಜನತೆಯನ್ನು ಎಚ್ಚರಿಸಿದರು.

“ಬೆಡೆನ್ ಯಾವುದೇ ರೀತಿಯಲ್ಲಿ ಇದುವರೆಗೂ ಚೀನಾವನ್ನು ವಿಮರ್ಶೆ ಮಾಡಿಲ್ಲ . ಅವರು ಚುನಾಯಿತರಾದರೆ ಚೀನಾ ನಮ್ಮ ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಅದು ಸಂಭವಿಸಲು ನಾವು ಅನುಮತಿಸುವುದಿಲ್ಲ” ಎಂದು ಟ್ರಂಪ್ ಹೇಳಿದರು.

ಜೋ ಬಿಡನ್ ಗೆಲ್ಲಬೇಕೆಂದು ಚೀನಾ ಬಯಸಿದೆ. ಈ ವರದಿಯನ್ನು ಗುಪ್ತಚರ ಇಲಾಖೆಯು ವ್ಯಕ್ತಪಡಿಸಿದೆ, ಅವರು ನನ್ನ ಗೆಲುವನ್ನು ಬಯಸಿದರೆ ಅದು ತುಂಬಾ ಅವಮಾನಕರವಾಗಿರುತ್ತದೆ. ಅಂತಹ ಒಂದು ಸನ್ನಿವೇಶವನ್ನು ಆಲೋಚಿಸಲೂ ನನ್ನಿಂದ ಅಸಾಧ್ಯ ! ಎಂದು ತನ್ನ ಮಾತಿನ ನಡುವೆ ಹೇಳಿಕೊಂಡಿದ್ದಾರೆ.