ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ, ದ.ಕ ಜಿಲ್ಲಾ ಸುನ್ನಿ ಕ್ರಿಯಾ ಸಮಿತಿಯ ಅಧ್ಯಕ್ಷ ಸಿ ಅಹ್ಮದ್ ಜಮಾಲ್ ಸಾಹೇಬ್ (ಪ್ರಾಯ 65 ವರ್ಷ) ಇಂದಿಲ್ಲಿ ತನ್ನ ಸ್ವ ಗ್ರಹದಲ್ಲಿ ನಿಧನರಾದರು. ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್. ಅವರಿಗೆ ಪತ್ನಿ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
22 ವರ್ಷಗಳ ಕಾಲ ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಅಧ್ಯಕ್ಷರೂ, ಮಂಗಳೂರು ಜುಮ್ಮಾ ಮಸೀದಿಯ ಮುಕ್ತೇಸರರೂ ಆಗಿದ್ದ ಸಿ. ಅಬ್ದುಲ್ ಹಮೀದ್ ಸಾಹೇಬರ ಪುತ್ರರಾಗಿದ್ದ ಇವರು ನಲ್ವತ್ತು ವರ್ಷಕ್ಕಿಂತಲೂ ಅಧಿಕ ಕಾಲ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನಲ್ಲಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಕಳೆದ ಹತ್ತು ವರ್ಷಗಳಿಂದ ರಾಜ್ಯ ಉಪಾಧ್ಯಕ್ಷರಾಗಿ ಸೇವೆಗೈಯುತ್ತಿರುವರು. ಜಿಲ್ಲೆಯ ಮುಸ್ಲಿಮರ ಎಲ್ಲಾ ಆಗಿಹೋಗುಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಇವರು ಇತ್ತೀಚೆಗಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.