Latest Posts

ಮಾನವೀಯತೆ ಮೆರೆದ ಪುತ್ತೂರಿನ‌ ಫೈರ್ ಬ್ರಾಂಡ್ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಹಿಂದೂ ಸಂಘಟನೆಯ ಮುಖಂಡ,ಬಿಜೆಪಿ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಮುಕ್ರಂಪಾಡಿಯಲ್ಲಿ ನಡೆದ ಸ್ಕೂಟರ್ ಅಪಘಾತದಲ್ಲಿ ತೀವ್ರ ಗಾಯಗೊಂಡ ಅನ್ಯ ಸಮುದಾಯದ ಯುವಕ ಮಹಮ್ಮದ್‌ ಅಕ್ಷಮ್ ರನ್ನು ತನ್ನ ಸ್ವಂತ ವಾಹನದಲ್ಲಿ ಪುತ್ತೂರು ಆಸ್ಪತ್ರೆ ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

ಪುತ್ತೂರು ಎಂದಾಕ್ಷಣ ಹಿಂದು- ಮುಸ್ಲಿಂ ಸಮುದಾಯದ ನಡುವೆ ಸಾಮರಸ್ಯ ಇಲ್ಲ ಎಂಬ ಮಾತು ಹಲವು ಸಲ ಕೇಳಿ ಬರುತ್ತದೆ ,ಆದರೆ ಅದು ಸುಳ್ಳು ,ಅದನ್ನು ಮೀರಿ ಇಲ್ಲಿ ಮಾನವೀಯತೆ ಗುಣ ಕೂಡ ಮುಖ್ಯ ವಾಗಿದೆ.ಪುತ್ತಿಲ ರವರ ಈ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ಜಾತಿ-ಧರ್ಮ ಬಿಟ್ಟು ಮಾನವೀಯತೆ,ಕೋಮು ಸೌಹಾರ್ದತೆಗೆ ಒತ್ತುಕೊಡಬೇಕೆಂಬ ಧ್ವನಿ ಕೇಳಿ ಬರುತ್ತಿದೆ.