Latest Posts

ಬೊಳ್ಳೂರಿನಲ್ಲಿ 39ನೇ ವಾರ್ಷಿಕ ದಫ್ ರಾತೀಬ್ ಹಾಗು ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

ವರದಿ: ಅದ್ದಿ ಬೊಳ್ಳೂರು



ಹಳೆಯಂಗಡಿ : ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಅಧೀನದಲ್ಲಿರುವ ಲಿಯಾವುಲ್ ಇಸ್ಲಾಂ ದಫ್ ಕಮಿಟಿ 39ನೇ ವಾರ್ಷಿಕ ದಫ್ ರಾತೀಬ್ ಹಾಗು ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಶನಿವಾರ ರಾತ್ರಿ ನಡೆಯಿತು.

ಬೊಳ್ಳೂರು ಉಸ್ತಾದ್ ಹಾಜಿ ಮೊಹಮ್ಮದ್ ಅಝ್ಹರ್ ಫೈಝಿ ನೇತೃತ್ವದಲ್ಲಿ
ಧ್ವಜಾರೋಹಣ ಹಾಗೂ ಮೌಲಿದ್ ಪಾರಾಯಣದ ಮುಖೇನ, ಕಳೆದ ಮೂರು ದಿನಗಳಿಂದ  ಬೊಳ್ಳೂರಿನಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವು,
ಹಾಜಿ ಪಿ.ಇಸ್ಮಾಯಿಲ್ ಮುಸ್ಲಿಯಾರ್, ಪ್ರಧಾನ  ದಫ್ ಉಸ್ತಾದ್ ಬೆಳ್ಳಾರೆ,
ಕೆ.ಎಚ್. ಹಸನ್ ಮುಸ್ಲಿಯಾರ್, ದಫ್ ಉಸ್ತಾದ್ ಬೊಳ್ಳೂರು
ಹಾಗು ಹಾಜಿ ಪಂಡಿತ್ ಬಿ.ಎ. ಇದ್ದಿನಬ್ಬ ತೋಡಾರ್ , ದಫ್ ಉಸ್ತಾದ್ ಬೊಳ್ಳೂರು,
ಇವರುಗಳ ನೇತೃತ್ವದಲ್ಲಿ ಶನಿವಾರ ಸಂಜೆ ದಫ್ ರಾತೀಬ್ ನೆರವೇರುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು

ಈ ಸಂದರ್ಭದಲ್ಲಿ ಬೊಳ್ಳೂರು ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ವೇದಿಕೆ ಕಾರ್ಯಕ್ರಮ ನಡೆಯಿತು.

ಪದ್ಮಶ್ರೀ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬ ಸೇರಿದಂತೆ ಸ್ಥಳೀಯರಾದ
ಬಿ.ಎಚ್. ಮೈಯದ್ದಿ ಬೊಳ್ಳೂರು ಹಾಗು ಶೇಖಬ್ಬ ಮೇಸ್ತ್ರಿ ಇಂದಿರಾನಗರ ಇವರನ್ನು ಸನ್ಮಾನಿಸಲಾಯಿತು.
ಕಳೆದ 40 ವರ್ಷಗಳಿಂದ ಬೊಳ್ಳೂರು ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಹು ಬೊಳ್ಳೂರು ಉಸ್ತಾದರನ್ನು ಸನ್ಮಾನಿಸಲಾಯಿತು

40 ವರ್ಷಗಳಿಂದ ಬೊಳ್ಳೂರು ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಹು ಬೊಳ್ಳೂರು ಉಸ್ತಾದರನ್ನು ಸನ್ಮಾನಿಸಲಾಯಿತು

ಈ ಸಂದರ್ಭ ಕೇರಳದ
ಅಸ್ಸಯ್ಯದ್ ಓ.ಎಮ್.ಎಸ್ ಮುಹಮ್ಮದಾಲಿ ಶಿಹಾಬ್ ತಂಙಲ್ ರವರು ವೇದಿಕೆಯಲ್ಲಿ ದುವಾ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ
ಹಾಜಿ ಅಬ್ದುಲ್ ಖಾದರ್ (ಅಧ್ಯಕ್ಷರು ಜುಮ್ಮಾ ಮಸೀದಿ ಬೊಳ್ಳೂರು)
ಟಿ. ಎಚ್. ಅಬ್ದುಲ್ ರಹಿಮಾನ್, (ಉಪಾಧ್ಯಕ್ಷರು)
ಎ.ಪಿ ಅಬ್ದುಲ್ಲಾ ಝೈನಿ, ಬಡಗನ್ನೂರು ಖತೀಬರು ಕದಿಕೆ, ಆದಂ ಅಮಾನಿ, ಖತೀಬರು ಪಕ್ಷಿಕೆರೆ ಮಸೀದಿ,
ಅಬ್ದುಲ್ಲಾ ಮದನಿ ಪಾತೂರು, ಖತೀಬರು ಸಾಗ್ ಮಸೀದಿ,
ಅಬುಬಕ್ಕರ್ ಮದನಿ   ಮುಡಿಪು, ಖತೀಬರು , ಸಂತೆಕಟ್ಟೆ ಮಸೀದಿ,ಹನೀಫ್ ದಾರಿಮಿ ಅಂಕೋಲ, ಸದರ್ ಮುಅಲ್ಲಿ, ಇಂದಿರಾನಗರ ಮದರಸ.ಹಾಜಿ ಸುಲೈಮಾನ್ ಕೊಪ್ಪಲ. ಶೇಖಬ್ಬ ಕಲ್ಲಾಪು, ಉಮರ್ ಫಾರೂಕ್,ಸಾಹುಲ್ ಹಮೀದ್ ಕದಿಕೆ, ಹಾಜಿ ಮೊಹಮ್ಮದ್ ನೂರಾನಿಯ, ಅಬ್ದುಲ್ ಖಾದರ್ ಸಾಗ್, ಅಬ್ದುಲ್ ಅಝಿಝ್ ಐಎಕೆ, ಎಮ್ ಎ. ಅಬ್ದುಲ್ ಖಾದರ್ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕೇರಳದ
ಅಸ್ಸಯ್ಯದ್ ಓ.ಎಮ್.ಎಸ್ ಮುಹಮ್ಮದಾಲಿ ಶಿಹಾಬ್ ತಂಙಲ್ ರವರು ವೇದಿಕೆಯಲ್ಲಿ ದುವಾ ಆಶೀರ್ವಚನ ನೀಡಿದರು.


ಇತ್ತೀಚೆಗೆ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ತೇರ್ಗಡೆಯಾದ ಮುಲ್ಕಿ ಕೊಲ್ನಾಡುವಿನ ಸಹೋದರ ಮಹಮ್ಮದ್ ಶಿಪಾಝ್ ರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಶೇಖುನ ಅಲ್ ಹಾಜಿ  ಎಂ.ಅಬ್ದುಲ್ಲಾ ಮುಸ್ಲಿಯಾರ್ ಖಾಝಿ, ಕೊಡಗು (ಸದಸ್ಯರು, ಸಮಸ್ತ ಕೇಂದ್ರ ಮುಶಾವರ) ಕಾರ್ಯಕ್ರಮವನ್ನು ಉದ್ಘಾಟಿಸಿ, ಅಬ್ದುಲ್ ನಾಸೀರ್ ಮುಸ್ಲಿಯರ್ (ಸದರ್ ಮುಅಲ್ಲಿಂ, ಇಂದಿರಾನಗರ) ಸ್ವಾಗತಿಸಿ ತ್ವಯ್ಯಿಬ್ ಫೈಝಿ ಧನ್ಯವಾದ ಸಮರ್ಪಿಸಿದರು 
ಮೋಯ್ದೀನ್ ಇಂದಿರಾನಗರ ಕಾರ್ಯಕ್ರಮ ನಿರೂಪಿಸಿದರು.

ಶೇಖುನ ಅಲ್ ಹಾಜಿ  ಎಂ.ಅಬ್ದುಲ್ಲಾ ಮುಸ್ಲಿಯಾರ್ ಖಾಝಿ, ಕೊಡಗು (ಸದಸ್ಯರು, ಸಮಸ್ತ ಕೇಂದ್ರ ಮುಶಾವರ) ಕಾರ್ಯಕ್ರಮವನ್ನು ಉದ್ಘಾಟಿಸಿ,