Latest Posts

ಈಶ್ವರಪ್ಪರಿಂದ ಕೋಮುಗಲಭೆ ಪ್ರಚೋದನೆ ಹೇಳಿಕೆ

ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಖಂಡನೆ

ಮಂಗಳೂರು: ಶಿವಮೊಗ್ಗದಲ್ಲಿ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಕೊಲೆಯಾದ ಹಿನ್ನಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಮಾಜದಲ್ಲಿ ಹಿಂದೂ, ಮುಸ್ಲಿಮ್ ಗಲಭೆಗೆ ಪ್ರಚೋದನೆ ನೀಡುವಂತಹ ಏಕ ಪಕ್ಷೀಯ ಹೇಳಿಕೆ‌ ನೀಡಿರುವುದು ಖಂಡನೀಯವಾಗಿದೆ .
ರಾಜ್ಯದ ಮಂತ್ರಿಗಳು ಯಾವುದೇ ಒಂದು ಜಾತಿ, ಧರ್ಮದ ಮಂತ್ರಿ ಗಳಲ್ಲ ಬದಲಾಗಿ ಇಡೀ ರಾಜ್ಯದ ಜನರ ಮಂತ್ರಿಯಾಗಿದ್ದಾರೆ.
ಸರ್ವಧರ್ಮೀಯರನ್ನು ಒಗ್ಗೂಡಿಸುತ್ತ ರಾಜ್ಯವನ್ನು ಬಲಪಡಿಸುವ ಉದ್ದೇಶವನ್ನಿಟ್ಟು  ಮಂತ್ರಿಗಳು ಕೆಲಸ ಮಾಡಬೇಕಿದೆ.

ಸಮಾಜದಲ್ಲಿ ಯಾವುದಾದರೂ ಅಹಿತಕರ ಘಟನೆಗಳು, ಗಲಾಟೆ, ಕೊಲೆಗಳು ಸಂಭವಿಸಿದರೆ ಅದಕ್ಕಾಗಿ ಸ್ವತಂತ್ರವಾಗಿ ವ್ಯವಹರಿಸುವಂತಹ ಅದರದೇ ಕಾನೂನು ವ್ಯವಸ್ಥೆ ನಮ್ಮಲ್ಲಿದೆ.

ಈಶ್ವರಪ್ಪನವರು ಒಂದು ಸಮುದಾಯದ ಹೆಸರೆತ್ತಿ ಒಂದು ಸಮುದಾಯವನ್ನೇ ಗೂಂಡಾಗಳಂತೆ ಬಿಂಬಿಸುತ್ತಿರುವುದು   ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸ್ರಷ್ಟಿಸುವ ಉದ್ದೇಶಕ್ಕಾಗಿದೆ.

ಇದನ್ನು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಯಸುವ ಮತದಾರರು ಮುಂದಿನ ದಿನಗಳಲ್ಲಿ ಈಶ್ವರಪ್ಪನವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಹೇಳಿಕೆ ನೀಡಿದ್ದಾರೆ.