ಮಂಗಳೂರು: ಆಡಳಿತ ವೈಫಲ್ಯದಿಂದ ರಾಜ್ಯದ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ಸರಕಾರ ವೈಫಲ್ಯಗಳನ್ನು ಮರೆಮಾಚಲು ತನ್ನ ಕೆಲವು ಬುದ್ದಿಹೀನ ನಾಯಕರನ್ನು ಛೂ ಬಿಟ್ಟು ಅವರ ಮೂಲಕ ನಿರಂತರವಾಗಿ ದೇಶದ್ರೋಹದ ಹೇಳಿಕೆ ನೀಡಿಸಿ ದೇಶಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ.
ತಮ್ಮನ್ನು ಸ್ವತಃ ರಾಷ್ಟ್ರ ಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರಿಗೆ ಮುಂದೆ ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಉಳಿದಿಲ್ಲ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ಗುಲಾಮರಾಗಿದ್ದವರನ್ನು ಆದರ್ಶವಾಗಿಸಿಕೊಂಡವರಿಗೆ ದೇಶದ ಪವಿತ್ರ ಸಂಕೇತವಾಗಿರುವ ರಾಷ್ಟ್ರ ಧ್ವಜದ ಮಹತ್ವ ಗೊತ್ತಿರಲು ಸಾಧ್ಯವೇ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಕಿಡಿಕಾರಿದರು.
ದೆಹಲಿಯ ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂಬ ದೇಶದ್ರೋಹದ ಹೇಳಿಕೆ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೇಶದ್ರೋಹದ ಆರೋಪದಡಿ ಮೊಕದ್ದಮೆ ದಾಖಲಿಸುವಂತೆ ಪೋಲಿಸ್ ಇಲಾಖೆಯನ್ನು ಆಗ್ರಹಿಸಿದರು.
ಬಿಜೆಪಿ ಶಾಸಕ ಹರೀಶ್ ಪುಂಜಾ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಹಿನ್ನಲೆ:
ದೇಶದ್ರೋಹದ ಆರೋಪದಡಿ ಮೊಕದ್ದಮೆ ದಾಖಲಿಸುವಂತೆ ಪೋಲಿಸ್ ಇಲಾಖೆಗೆ ಆಗ್ರಹ
ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ಗುಲಾಮರಾಗಿದ್ದವರಿಗೆ ರಾಷ್ಟ್ರ ಧ್ವಜದ ಮಹತ್ವ ಗೊತ್ತಿರಲು ಸಾಧ್ಯವೇ?!
ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಕಿಡಿ
