Latest Posts

ಹಿಜಾಬ್ ತೀರ್ಪು: ಶಾಂತಿಯುತ ಕರ್ನಾಟಕ ಬಂದ್ ಕರೆಗೆ MJF ಸಂಘಟನೆ ಸಂಪೂರ್ಣ ಬೆಂಬಲ

ಸ್ವಯಂಪ್ರೇರಿತವಾಗಿ ವ್ಯವಹಾರಗಳನ್ನು ಸ್ಥಗಿತಗೊಳಿಸಿ ನಾಗರಿಕರು ಸಹಕರಿಸಬೇಕಾಗಿ ವಿನಂತಿ: ವಹಾಬ್ ಕುದ್ರೋಳಿ

ಮಂಗಳೂರು: ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ ನಾಳೆ (ಮಾರ್ಚ್ 17 ) ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಶಾಂತಿಯುತ ಕರ್ನಾಟಕ ಬಂದ್ ಗೆ MJF ಮುಸ್ಲಿಂ ಜಸ್ಟಿಸ್ ಫೊರಮ್ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರ.ಕಾರ್ಯದರ್ಶಿ ವಹಾಬ್ ಕುದ್ರೋಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಜಾಬ್ ತೀರ್ಪು ಸಮುದಾಯದ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಆ ನಮ್ಮ ನೋವನ್ನು ವ್ಯಕ್ತಪಡಿಸಲು ನಾಳಿನ ಒಂದು ದಿನದ ಶಾಂತಿಯುತ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು, ವ್ಯವಹಾರಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸುವ ಮೂಲಕ ನಾಗರಿಕರು ಸಹಕರಿಸಬೇಕಾಗಿ ವಿನಂತಿ ಮಾಡಿದರು.