Latest Posts

ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವ ಹಿನ್ನೆಲೆ:
ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ, ನಾರಾಯಣ ಗುರುಗಳ ತತ್ವವನ್ನು ಕೂಡ ಸೇರಿಸಲಿ: ಯು.ಟಿ.ಖಾದರ್


ಬಳ್ಳಾರಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಸೇರಿಸಿ ಮಕ್ಕಳಿಗೆ ಮೌಲಿಕ ಶಿಕ್ಷಣ ಕೊಡಲಿ ಎಂದು ಕಾಂಗ್ರೆಸ್ ನಾಯಕ, ಶಾಸಕ ಯು.ಟಿ.ಖಾದರ್ ಅವರು ಸಲಹೆ ನೀಡಿದರು.

ಪಠ್ಯದಲ್ಲಿ ಭಗವದ್ಗೀತೆ ಅಷ್ಟೇ ಅಲ್ಲ, ಕುರಾನ್, ಬೈಬಲ್, ಬಸವಣ್ಣರ ವಚನ ಸಾಹಿತ್ಯ, ನಾರಾಯಣಗುರು ಅವರ ಚಿಂತನೆ, ಕೋಟಿ ಚನ್ನಯ್ಯನವರ ವಿಚಾರ ಸೇರಿದಂತೆ ಎಲ್ಲಾ ಧರ್ಮಗಳ ಉತ್ತಮ ಅಂಶಗಳನ್ನು ಸೇರಿಸಿ ಮಕ್ಕಳ ವ್ಯಕ್ತಿತ್ವ ವಿಕಸಬಗೊಳಿಸಲಿ ಎಂದರು.

ಬಳ್ಳಾರಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಪಕ್ಷದ ವೀಕ್ಷಕರಾಗಿ ಬಂದಿದ್ದ ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.