ಬಂಟ್ವಾಳ: ನೂತನವಾಗಿ ನಿರ್ಮಿಸಿದ ಮಂಚಿ ಬಾಲಾಜಿಬೈಲ್ ಮಸ್ಜಿದುರ್ರಹ್ಮಾನ್ ಜುಮಾ ಮಸೀದಿ ಹಾಗೂ ಮದ್ರಸ ಕಟ್ಟಡ ಲೋಕಾರ್ಪಣೆಗೊಂಡಿತು.
ಮಸೀದಿ ಕಟ್ಟಡದ ಉದ್ಘಾಟನೆಯನ್ನು ಸೈಯ್ಯದ್.ಪೂಕುಂಞ ಕೋಯ ತಂಙಳ್ ಉದ್ಯಾವರ ಅವರು ನೆರವೇರಿಸಿದರು ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಮಸೀದಿ ಕಟ್ಟಡದ ವಕ್ಫ್ ಕಾರ್ಯಗಳನ್ನು ನೆರವೇರಿಸಿ ಮಸೀದಿಯನ್ನು ಪ್ರಾರ್ಥನಾ ಮುಕ್ತಗೊಳಿಸಿದರು.

ಆ ನಂತರ ಮದ್ರಸ ಕಟ್ಟಡದ ಉದ್ಘಾಟನೆಯನ್ನು ಮಂಚಿ ಉಸ್ತಾದ್ ಶೈಖುನಾ ಇಬ್ರಾಹಿಂ ಮದನಿ ಅವರು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಕೆ.ಎ.ಮುಹಮ್ಮದ್ ಸಖಾಫಿ ಅವರು ವಹಿಸಿಕೊಂಡಿದ್ದರು.
ಈ ಸಂಧರ್ಭದಲ್ಲಿ ನೂತನ ಮಸೀದಿ ನಿರ್ಮಾಣ ಕಾರ್ಯದಲ್ಲಿ ಜಮಾಅತ್ ಸಮಿತಿ ಜೊತೆ ಕೈಜೋಡಿಸಿ ಸಂಪೂರ್ಣ ಸಹಕಾರ ನೀಡಿದ ಎಮ್.ಎನ್.ಜಿ ಫೌಂಡೇಶನ್ ಸಂಸ್ಥೆಯ ಸೇವಾ ಕಾರ್ಯವನ್ನು ವಿಶೇಷವಾಗಿ ಸ್ಮರಿಸಿ ಶ್ಲಾಘಿಸಿದ ಸೈಯ್ಯದ್. ಪೂಕುಂಙ ತಂಙಳ್ ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಇತರ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಸಂಜೆ ಮಸೀದಿ ಅಧ್ಯಕ್ಷರಾದ ಮೊಯಿದಿನಬ್ಬ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು.
ಮಸೀದಿಯ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಹನೀಫಿ ಅವರು ಸ್ವಾಗತ ಭಾಷಣ ಮಾಡಿದರು.
ವೇದಿಕೆಯಲ್ಲಿ ಬಶೀರ್ ಸಖಾಫಿ ಕಾನಕ್ಕೋಡ್, ಇಲ್ಯಾಸ್ ಮಂಗಳೂರು, ಅಬ್ದುಲ್ ರಹಮಾನ್ ಸಖಾಫಿ, ಮುಹಮ್ಮದ್ ರಫೀಕ್ ಜೌಹರಿ, ಅಬ್ದುಲ್ ಅಝೀಝ್, ಅಬ್ದುಲ್ ರಹಮಾನ್ ಕೋಡಿಬೈಲ್, ಎಸ್.ಎಮ್. ಅಬೂಬಕ್ಕರ್, ಸುಲೈಮಾನ್ ಹಾಗೂ ಆದಂ ಮುಸ್ಲಿಯಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಮ್.ಎನ್.ಜಿ ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳಾದ ಮನ್ಸೂರ್ ಬಿ.ಸಿ ರೋಡ್, ಎಮ್.ಎಮ್.ಮೋನು ನಂದಾವರ, ಇಸಾಕ್ ತುಂಬೆ, ಸಿದ್ದೀಕ್ ಕೊಳಕೆ, ಕಲಂದರ್ ಬಜ್ಪೆ, ಸೈಯ್ಯದ್ ಶಿಹಾಬ್ ತಂಙಳ್, ಹನೀಫ್ ಸಜಿಪ, ನವಾಝ್, ಶಾಕಿರ್ ಪಾವೂರು, ಸಲೀಂ, ಝಿಯಾರ್ ಮಂಚಿ ಹಾಗೂ ಬಶೀರ್ ಸುಳ್ಯ, ಸತ್ತಾರ್ ಕೊಪ್ಪಳ ಉಪಸ್ಥಿತರಿದ್ದರು.
ಮಗ್ರಿಬ್ ನಮಾಝ್ ಬಳಿಕ ಮಸೀದಿಯ ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಸಖಾಫಿ ಅವರ ನೇತೃತ್ವದಲ್ಲಿ ಬೃಹತ್ ಮೌಲೀದ್ ಪರಾಯಣ ಹಾಗೂ ಇಶಾ ನಮಾಝ್ ಬಳಿಕ ಅಬೂ ಶೈಮ ಮುಹಮ್ಮದ್ ಸ್ವಾದಿಕ್ ಸಖಾಫಿ ಅವರು ಮುಖ್ಯ ಪ್ರಭಾಷಣ ಮಾಡಿದರು.