Latest Posts

ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ವತಿಯಿಂದ ಆಧ್ಯಾತ್ಮಿಕ ಮಾಸಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ಸಯ್ಯಿದುಲ್ ಉಮ್ಮ ಮರ್ಹೂಮ್ ಅಸ್ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ

ಹಳೆಯಂಗಡಿ : ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ವತಿಯಿಂದ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ಸಯ್ಯಿದುಲ್ ಉಮ್ಮಾ ಮರ್ಹೂಮ್ ಅಸ್ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ಕಾರ್ಯಕ್ರಮ ಸೊಮವಾರ ಇಶಾ ನಮಾಝಿನ ನಂತರ ಶಂಸುಲ್ ಉಲಮಾ‌ ಮೆಮೋರಿಯಲ್ ಪೌಂಡೇಶನ್ ಬೊಳ್ಳೂರು ಇದರ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜು ಬೊಳ್ಳೂರು ಇದರ ಪ್ರಿನ್ಸಿಪಾಲ್ ಶೈಖುನಾ ಬೊಳ್ಳೂರು ಉದ್ಘಾಟಿಸಿದರು

ಕಾರ್ಯಕ್ರಮವನ್ನು ಅಬ್ದುಲ್ ಜಬ್ಬಾರ್  ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜು ಬೊಳ್ಳೂರು ಇದರ ಪ್ರಿನ್ಸಿಪಾಲ್ ಶೈಖುನಾ ಬೊಳ್ಳೂರು ಉದ್ಘಾಟಿಸಿದರು


ಕದಿಕೆ ಜುಮಾ‌ ಮಸೀದಿಯ ಖತೀಬ್ ಝೈನಿ ಉಸ್ತಾದ್ ಪ್ರಾಸ್ತಾವಿಕವಾಗಿ ನುಡಿದರು. ಮುಲ್ಕಿ ಜುಮಾ ಮಸೀದಿಯ ಖತೀಬ್ ಬಹು ಎಸ್.ಬಿ ಮಹಮ್ಮದ್ ದಾರಿಮಿ ಹೈದರಾಲಿ ಶಿಹಾಬ್ ತಂಙಳರ ಜೀವನ ಶೈಲಿ ಮತ್ತು ಸಮಾಜಿಕ, ರಾಜಕೀಯ ರಂಗದಲ್ಲಿ ನಡೆಸಿದ ಗಣನೀಯ ಸೇವೆಯ ಕುರಿತು ಮುಖ್ಯ ಪ್ರಭಾಷಣ ನಡೆಸಿದರು. ದಾರುನ್ನೂರ್ ವಿದ್ಯಾರ್ಥಿಗಳು ಮಜ್ಲಿಸುನ್ನೂರ್ ಸಂಗಮ ನಡೆಸಿದರು
ಸೈಯ್ಯಿದರ ಹೆಸರಿನಲ್ಲಿ ಖತಮುಲ್ ಖುರ್.ಆನ್ ಹಾಗೂ ತಹ್ಲೀಲ್ ಸಮರ್ಪಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಬೊಳ್ಳೂರಿನಲ್ಲಿ ಮೇ 24ರಂದು ನಡೆಯುವ ನೂರೆ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮದ ಪೂಸ್ಟರ್ ಬಿಡುಗಡೆಗೊಳಿಸಲಾಯಿತು.

ಬೊಳ್ಳೂರಿನಲ್ಲಿ ಮೇ 24ರಂದು ನಡೆಯುವ ನೂರೆ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮದ ಪೂಸ್ಟರ್ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಬೊಳ್ಳೂರು ಮಸೀದಿಯ ಉಪಾಧ್ಯಕ್ಷ ಟಿ.ಎಚ್ ರೆಹಮಾನ್,ಕಾರ್ಯದರ್ಶಿ ಹಾಜಿ ಸುಲೈಮಾನ್ ಕೊಪ್ಪಲ,ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಅಧ್ಯಕ್ಷ ಉಮರುಲ್ ಪಾರೂಕ್,ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಅಬ್ದುಲ್ ಕಾದರ್ ಹಾಗೂ ಅಬ್ದುಲ್ ಅಝೀಝ್ ,ಎಸ್.ಯು.ಎಮ್.ಎಫ್ ಅಧ್ಯಕ್ಷ ಬಿ.ಇ ಮಹಮ್ಮದ್ , ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅಧ್ಯಕ್ಷ ಶಂಸುದ್ದೀನ್ ರೈಲ್ವೇಗೇಟ್,ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಅಧ್ಯಕ್ಷ ಬಾಯಿಸ್ ಬೊಳ್ಳೂರು,ರಿಯಾಝ್ ಪೈಝಿ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು
ಬಹು ಮಹಮ್ಮದ್ ಹನೀಫ್ ದಾರಿಮಿ ಸ್ವಾಗತಿಸಿದರು,ಬಹು ತ್ವಯ್ಯೀಬ್ ಪೈಝಿ ಬೊಳ್ಳೂರು ವಂದಿಸಿದರು