Latest Posts

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ( AIKMCC) ಸುಳ್ಯ ತಾಲ್ಲೂಕು ಸಮಿತಿ ಅಸ್ಥಿತ್ವಕ್ಕೆ : ಅಧ್ಯಕ್ಷರಾಗಿ ಖಲಂದರ್ ಎಲಿಮಲೆ ಆಯ್ಕೆ

ಸುಳ್ಯ : ಬೆಂಗಳೂರು ಕೇಂದ್ರ ಸಮಿತಿಯ ಅಧೀನದಲ್ಲಿ ಬರುವ ( AIKMCC) ಸುಳ್ಯ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಖಲಂದರ್ ಎಲಿಮಲೆ,ಪ್ರದಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ,ಕೋಶಾಧಿಕಾರಿಯಾಗಿ ಹಮೀದ್ ಬೆಳ್ಳಾರೆ. ನೇಮಕಗೊಂಡಿದ್ದಾರೆ.

ದ,ಕ,ಜಿಲ್ಲಾ AIKMCC ಯ ಖಜಾಂಜಿಯಾದ ಖತ್ತರ್ ಇಬ್ರಾಹಿಂ ಹಾಜಿಯವರ ನೇತೃತ್ವದಲ್ಲಿ ಇಂದು ಸುಳ್ಯದ ಗ್ರ್ಯಾಂಡ್ ಪರಿವಾರ ಆಡಿಟೋರಿಯಮ್ ನಲ್ಲಿ ನಡೆದ ಸಭೆಯಲ್ಲಿ ನೇಮಕ ಮಾಡಲಾಯಿತು.

ರಕ್ತದಾನ,ಸಾಮೂಹಿಕ ವಿವಾಹ,ರೋಗಿಗಳ ಆರೈಕೆ,ಕೋವಿಡ್ ಕೇರ್ ಸೆಂಟರ್ ಮುಂತಾದ ಸಾಮಾಜಿಕ ಕಾರ್ಯಕ್ರಮಗಳು ಈ ಸಮಿತಿಯ ವತಿಯಿಂದ ನಡೆಯುತ್ತಿದ್ದು,ಕಳೆದ 3 ವರ್ಷಗಳಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ವಿವಿಧ ಧರ್ಮಗಳ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದೆ.

ಸಮಿತಿಯ ಮುಖ್ಯ ರಕ್ಷಾದಿಕಾರಿಯಾಗಿ ಟಿ,ಎಂ,ಶಾಹಿದ್ ತೆಕ್ಕಿಲ್,ರಕ್ಷಾದಿಕಾರಿಯಾಗಿ ಇಬ್ರಾಹಿಂ ಹಾಜಿ ಖತ್ತರ್, ,ಜಂಟಿ ಕಾರ್ಯದರ್ಶಿ ಯಾಗಿ,ಬಶೀರ್ ಯು ಪಿ,,ಹಾಗೂ ಶಂಸುದ್ದೀನ್ ಆರಂತೋಡು,
ಉಪಾಧ್ಯಕ್ಷ ರಾಗಿ ಹೈದರ್ ಕಳಂಜ,ಅಶ್ರಫ್ ಕುಂಬ್ಳೆ,

ಮೆಡಿಕಲ್ ಉಸ್ತುವಾರಿಯಾಗಿ ಫೈಸಲ್ ಜಟ್ಟಿಪಲ್ಲ ಹಾಗೂ ಶಹೀದ್ ಪಾರೆ,

ಮೀಡಿಯಾ ಉಸ್ತುವಾರಿಯಾಗಿ
ಸಿರಾಜ್ ನೆಟ್ಟಾರ್ ಹಾಗೂ ನಾಸಿರ್ ಪೆರ್ಲ0ಪಾಡಿ
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಹಮೀದ್ ಎಚ್ ಎಂ ಬೆಳ್ಳಾರೆ. ಕೆ ಪಿ,ಮಹಮ್ಮದ್ ಕಲ್ಲುಗುಂಡಿ, ರಝಾಕ್ ಹಾಜಿ ರಾಜಧಾನಿ ನೇಮಕಗೊಂಡಿದ್ದಾರೆ.