ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಕೇರಳದ ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಅವರನ್ನು ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿದೆ ಎಂಬ ತಲೆಬರಹದಲ್ಲಿ ಕನ್ನಡದ ಕೆಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದವು.

ಈ ಸುದ್ದಿಯ ನೈಜತೆಯ ಜಾಡುಹಿಡಿದು ಪೀಪಲ್ಸ್ ವಿಷನ್ ಡಾಟ್ ಇನ್ ತಂಡ ಅನ್ವೇಷಿಸಿದಾಗ ಸಮೀಕ್ಷೆ ನಡೆಸಿದ ಪ್ರೋಸ್ಪೆಕ್ಟ್ ಮ್ಯಾಗಝಿನ್ ಇಂಗ್ಲೆಂಡ್ ನ ಲೋಕಲ್ ಮ್ಯಾಗಝಿನ್ ಆಗಿದ್ದು ಫೇಸ್ಬುಕ್ ನಲ್ಲಿ ಕೇವಲ ಇಪ್ಪತ್ತು ಸಾವಿರದಷ್ಟು ಮಾತ್ರ ಪೇಜ್ ಲೈಕ್ ಗಳನ್ನು ಪಡೆದಿದೆ. 19 ಸಾವಿರದಷ್ಟು ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ಅರ್ಧದಷ್ಟು ಅಂದರೆ ಸುಮಾರು 10,600 ಮಂದಿ ಮಳಯಾಳಿಗರು ಆಗಿದ್ದಾರೆ.