Latest Posts

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಮಸೂದೆ ವಿರುದ್ದ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ

ಕೃಷಿ ಮಸೂದೆ ವಿಷಯವಾಗಿ ರಾಜ್ಯಗಳನ್ನು ಸಂಪರ್ಕಿಸದೇ ಮಸೂದೆಯನ್ನು ಅಂಗೀಕರಿಸುವುದು ಸರಿಯಾದ ಕ್ರಮವಲ್ಲ ಎಂದು ಕಾನೂನು ತಙ್ಞರು ಅಭಿಪ್ರಾಯಪಟ್ಟಿದ್ದಾರೆ.

ತಿರುವನತಪುರಂ :- ಕೇಂದ್ರ ಸರ್ಕಾರದ ವಿವಾದಾತ್ಮಕವಾದ ಕೃಷಿ ಮಸೂದೆ ವಿರುಧ್ಧವಾಗಿ ಸುಪ್ರೀಂಕೋರ್ಟ್ ಗೆ ಹೋಗಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯ್ತು.

ಕೇದ್ರ ಸರ್ಕಾರದ ಕಾಯ್ದೆಯು ರಾಜ್ಯಗಳ ಅಧಿಕಾರದ ಮೇಲೆ ಅತಿಕ್ರಮಣ ಎಂದು ವಿಶ್ಲೇಷಿಸಿತು.
ಕೃಷಿ ಮಸೂದೆಗಳು ಸಂವಿಧಾನಿಕ ಗಂಭೀರವಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ,ಕೃಷಿ ಸಂವಿಧಾನಿಕವಾಗಿ ಏಕಕಾಲಿಕ ಪಟ್ಟಿಯಲ್ಲಿರುವ ವಿಷಯವಾಗಿದ್ದು ರಾಜ್ಯಗಳನ್ನು ಸಂಪರ್ಕಿಸದೇ ಮಸೂದೆಯನ್ನು ಅಂಗೀಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ಕಾನೂನು ತಙ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ಕೂಡ ಕೇರಳ ಮುಖ್ಯಮಂತ್ರಿ ಅವರು ಕಾರ್ಶಕ ಮಸೂದೆ ವಿರುಧ್ಧ ತೀವೃ ವಾಗ್ಧಾಳಿ ನಡೆಸಿದ್ದರು.
ನೂತನ ಕೃಷಿ ಮಸೂದೆ ವಿರುಧ್ಧ ಪ್ರತಿಪಕ್ಷಗಳು ಸಂಸತ್ತಿನಲ್ಲಿ ತೀವೃವಾಗಿ ಪ್ರತಿಭಟನೆ ನಡೆಸುತ್ತಿದೆ.