Latest Posts

ಸಂಘಿಗಳು ಕೋತಿಗಳ ತರ ವರ್ತಿಸುತ್ತಾರೆ;ಬಿಜೆಪಿ ಸೇರಿದ ಬೆನ್ನಲ್ಲೇ ವೈರಲ್ ಆದ ಖುಷ್ಪೂ ಟ್ವೀಟ್!

ನವದೆಹಲಿ: ಬಿಜೆಪಿಗೆ ಸೇರಿದ ನಂತರ ನಟಿ ಖುಷ್ಬೂ ಅವರ ಹಳೆಯ ಟ್ವೀಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಘಿಗಳು ಕೋತಿಗಳಂತೆ ವರ್ತಿಸುತ್ತಾರೆ, ಅವರಿಗೆ ಜ್ಞಾನೇಂದ್ರಿಯಗಳು (6th sence) ಇಲ್ಲ ಎಂದ ಖುಷ್ಬೂರವರ ಹಳೆಯ ಟ್ವೀಟ್ ವೈರಲ್ ಆಗುತ್ತಿದೆ.ನೀವು ಅದೇ ಕೋತಿಗಳ ಗುಂಪಿಗೆ ಸೇರಿದ್ದೀರಾ ಎಂದು ಅನೇಕರು ಅದನ್ನು ರಿಟ್ವೀಟ್ ಮಾಡುತ್ತಿದ್ದಾರೆ.

ಆರು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ ನಂತರ ಖುಷ್ಬೂ ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲಸ ಮಾಡುವಾಗ, ಖುಷ್ಬೂ ಚಾನೆಲ್ ಚರ್ಚೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಘ ಪರಿವಾರವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಆದರೆ ಬಿಜೆಪಿ ಈಗ ಕಂಡು ಕಂಡರಿಯದಂತೆ ಇದನ್ನೆಲ್ಲ ಒಮ್ಮೆಗೇ ನುಂಗಿ ಹಾಕಿದೆ.ಸಂಗಪರಿವಾರ ಮತ್ತು ಬಿಜೆಪಿಗರನ್ನು ಟ್ರೋಲ್ ಮಾಡಿ ಹಾಕಿದ ಹಲವು ಟ್ವೀಟ್ ಗಳು ತಿರುಗುಬಾಣವಾಗಿದೆ.ನೆಟ್ಟಿಗರು ಹಳೆಯ ಟ್ವೀಟ್ ಗಳನ್ನು ರಿಟ್ವೀಟ್ ಮಾಡುವ ಮೂಲಕ ಖುಷ್ಬೂ ಕಾಲೆಲೆಯುತ್ತಿದ್ದಾರೆ.

ನಿನ್ನೆ ಮಧ್ಯಾಹ್ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಖುಷ್ಬೂ ಪಕ್ಷಕ್ಕೆ ಸೇರಿದರು.ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಖುಷ್‌ಬೂಗೆ ಸದಸ್ಯತ್ವ ನೀಡಿದರು. ನಂತರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರೊಂದಿಗೆ ಖುಷ್ಬೂ ಮಾತುಕತೆ ನಡೆಸಿದರು.ತಮಿಳುನಾಡಿನಲ್ಲಿ ಬಿಜೆಪಿಯ ಗೆಲುವು ಖಚಿತಪಡಿಸಿಕೊಳ್ಳಲು ಶ್ರಮಿಸುವುದಾಗಿ ಖುಷ್ಬೂ ಹೇಳಿದರು.