Latest Posts

ಗಂಡು ಮಗುವಿಗೆ ಜನ್ಮ‌ನೀಡಿದ ಸಿಎಎ ಆಂದೋಲನ ನಡೆಸಿದ ವೀರ ಸಹೋದರಿ ಸಫೂರ‌‌ ಝರ್ಗರ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗರ್ಭಿಣಿಯಾಗಿದ್ದಾಗ ದೆಹಲಿ ಪೊಲೀಸರ ಜೈಲಿನಲ್ಲಿದ್ದ ಜಾಮಿಯಾ ವಿದ್ಯಾರ್ಥಿನಿ ಸಫೂರ ಝರ್ಗರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


ಸಿಎಎ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸಫೂರಾ ಝರ್ಗರ್ ಎಂಬ ಗರ್ಭಿಣಿ ಮಹಿಳೆಯನ್ನು ಏಪ್ರಿಲ್ 10 ರಂದು ದೆಹಲಿ ಪೊಲೀಸರು ಜೈಲಿಗೆ ಹಾಕಿದ್ದರು.
ತೀವ್ರವಾದ ಕಾನೂನು ಹೋರಾಟದ ನಂತರ ಜೂನ್ 23 ರಂದು ಸಫೂರ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತು.


ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ವಿಭಾಗದ ಕನ್ವೀನರ್ ಆಗಿದ್ದ ಸಫೂರ ದೆಹಲಿಯಲ್ಲಿ ನಡೆದ ಗಲಭೆಗಳಿಗೆ ನೇತೃತ್ವ ವಹಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ಸೋಗಿನಲ್ಲಿ ಜನರನ್ನು ಗಲಭೆಗೆ ಪ್ರಚೋದಿಸಲು ಅವರು ವಿದ್ಯಾರ್ಥಿಗಳ ಹಕ್ಕನ್ನು ಬಳಸಿದ್ದಾರೆ ಎಂದು, ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಯುಎಪಿಎ ಸಫೂರ ವಿರುದ್ಧ ಆರೋಪಿಸಿತ್ತು.


ಗರ್ಭಿಣಿ ಸಫೂರಾರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲು ದೆಹಲಿ ಪೊಲೀಸರು ತೆಗೆದುಕೊಂಡ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿತ್ತು.