Latest Posts

‘ನೀವು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದೀರಿ, ಮಕ್ಕಳ ಚಡ್ಡಿ ಹಾಕಿ ನಾಗ್ಪುರದಲ್ಲಿ ಫೋನ್ ಮೂಲಕ ಅರಚಾಡುಗುದಲ್ಲ ದೇಶಪ್ರೇಮ’; ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ ಸಚಿನ್ ಪೈಲಟ್

ಜೈಪುರ: ಸಚಿನ್ ಪೈಲಟ್ ಆರ್‌ಎಸ್‌ಎಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ದೇಶದ ರೈತರನ್ನು ಕತ್ತಲೆಗೆ ತಳ್ಳುತ್ತಿದೆ ಎಂದರು. ದೇಶಾದ್ಯಂತ ರೈತರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಂತೆಯೂ ಸರ್ಕಾರ ‘ಲವ್ ಜಿಹಾದಿ’ ಮತ್ತು ಮದುವೆಗಳ ಬಗ್ಗೆ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ.

“ರೈತರ ಜೊತೆ ನಿಂತಾಗ , ಅದು ನಿಜವಾದ ರಾಷ್ಟ್ರೀಯತೆ,ಅಲ್ಲದೇ ನಾಗ್ಪುರದಿಂದ ಮಕ್ಕಳ ಚಡ್ಡಿ ಹಾಕಿಕೊಂಡು ಫೋನ್ ಮುಖಾಂತರ ಅರಚಾಡುವುದಲ್ಲ” ಎಂದು ಸಚಿನ್ ಪೈಲಟ್ ಆರ್ಎಸ್ಎಸ್ ಅನ್ನು ಪರೋಕ್ಷವಾಗಿ ಟೀಕಿಸಿದರು.

ಲವ್ ಜಿಹಾದ್ ಬಗ್ಗೆ ಮಾತ್ರ ಚರ್ಚಿಸುವ ಮೂಲಕ ರೈತರ ಭವಿಷ್ಯವನ್ನು ಕತ್ತಲೆಗೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.