Latest Posts

ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೇಂದ್ರ ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆ

ನವದೆಹಲಿ: ಕೇಂದ್ರ ಸೇನಾ ಮುಖ್ಯಸ್ಥ ದಿವಂಗತ ಬಿಪಿನ್ ರಾವತ್ ರ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಡಿಸೆಂಬರ್ 8 ರಂದು, ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಜಂಟಿ ಸೇನಾ ಮುಖ್ಯಸ್ಥ, ಅವರ ಪತ್ನಿ ಮತ್ತು 11 ಸೈನಿಕರು ಸಾವನ್ನಪ್ಪಿದ್ದರು. ನನ್ನ ತಂದೆ ಕೂಡ ಬಿಜೆಪಿ ಬೆಂಬಲಿಗರಾಗಿದ್ದರು ಎಂದು ವಿಜಯ್ ರಾವತ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಚಟುವಟಿಕೆಗಳು ನನಗೆ ಬಿಜೆಪಿಯೊಂದಿಗೆ ಆಕರ್ಷಿತವಾಗಿ ನಾನು ಸೇರಿದ್ದೇನೆ ಎಂದು ಹೇಳಿದರು.

ಸಹೋದರ ಬಿಪಿನ್ ರಾವತ್ ನಿವೃತ್ತಿಯ ನಂತರವೂ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸಿದ್ದರು, ಅದನ್ನು ರಾವತ್ ಸಹೋದರ ವಿಜಯ್ ರಾವತ್ ಮೂಲಕ ಸಾಧಿಸಿ ಕೊಡಲಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧೋಮಿ ಹೇಳಿದ್ದಾರೆ.