ನವದೆಹಲಿ: 2019-2020ರ ಆರ್ಥಿಕ ವರ್ಷದಲ್ಲಿ ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದರೆ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ ಇದೆ.
ಬಿಜೆಪಿ ಆಸ್ತಿ 4847.78 ಕೋಟಿ ರೂ. ಬಿಎಸ್‌ಪಿ 698.33 ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಕಾಂಗ್ರೆಸ್ ನ ಆಸ್ತಿ 588.16 ಕೋಟಿ ರೂ. ಚುನಾವಣಾ ಆಯೋಗದ ಮಾಹಿತಿಯನ್ನು ಆಧರಿಸಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ವರದಿಯನ್ನು ಸಿದ್ಧಪಡಿಸಿದೆ.
ವರದಿಯ ಪ್ರಕಾರ, ಏಳು ರಾಷ್ಟ್ರೀಯ ಪಕ್ಷಗಳು 6988.57 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, 44 ಪ್ರಾದೇಶಿಕ ಪಕ್ಷಗಳು 2129.38 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿವೆ.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷವು ಅತಿ ಹೆಚ್ಚು ಆಸ್ತಿ (563.47 ಕೋಟಿ ರೂ.) ಹೊಂದಿದೆ. ನಂತರದಲ್ಲಿ ಟಿಆರ್‌ಎಸ್ (301.47 ಕೋಟಿ) ಮತ್ತು ಎಐಎಡಿಎಂಕೆ (267.61 ಕೋಟಿ) ಇವೆ.
ಬಿಜೆಪಿಯ ಸ್ಥಿರ ಹೂಡಿಕೆ 3253 ಕೋಟಿ ರೂ. ಬಿಎಸ್‌ಪಿ 618 ಕೋಟಿ ರೂಪಾಯಿ ಸ್ಥಿರ ಹೂಡಿಕೆಯನ್ನು ಹೊಂದಿದೆ. ಕಾಂಗ್ರೆಸ್ 240 ಕೋಟಿ ಸ್ಥಿರ ಹೂಡಿಕೆ ಹೊಂದಿದೆ. ಪಕ್ಷಗಳ ಒಟ್ಟು ಹೊಣೆಗಾರಿಕೆ `134.93 ಕೋಟಿ. ಕಾಂಗ್ರೆಸ್ ಅತಿ ದೊಡ್ಡ ಹೊಣೆಗಾರಿಕೆ (49.55 ಕೋಟಿ) ಹೊಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಬಿಜೆಪಿಯ ಆಸ್ತಿ 1.6 ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್‌ನ ಆಸ್ತಿ ಇಳಿಮುಖವಾಯಿತು. ಪಕ್ಷಗಳು ಹಣವನ್ನು ದೇಣಿಗೆಯಾಗಿ ಸ್ವೀಕರಿಸಿದರು.
ದೇಶದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ಪಕ್ಷ ಯಾವುದೇ ಇದೆ ನೋಡಿ..!!!
ಕಾಂಗ್ರೆಸ್ ಅಥವಾ ಬಿಜೆಪಿ..??
