ದೆಹಲಿ: ನುಪುರ್ ಶರ್ಮಾರ ಹೇಳಿಕೆಯಿಂದ ಭಾರತ ದೇಶ ಇಡೀ ವಿಶ್ವದಲ್ಲಿ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.ಈ ಬಿಜೆಪಿಗಾಗಿ ನಮ್ಮ ಭವ್ಯ ಭಾರತದೇಶ ಯಾಕಾಗಿ ತಲೆತಗ್ಗಿಸುವಂತಾಗಬೇಕು?ನುಪುರ್ ರಂತಹ ಕೋಮುವಾದಿಗಳನ್ನು ಈ ಕೂಡಲೇ ಬಂಧಿಸಿ ಜೈಲಿಗಟ್ಟಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಮಧ್ಯೆ ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೋಲೀಸರು ನುಪುರ್ ವಿರುದ್ಧ ಸಮ್ಮನ್ಸ್ ಜಾರಿ ಮಾಡಲು ಅದೇಶ ನೀಡಿದೆ.
ಟಿವಿ ಸುದ್ದಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳು ಭಾರೀ ವಿವಾದವನ್ನು ಉಂಟುಮಾಡಿದ ನಂತರ ಬಿಜೆಪಿ ವಕ್ತಾರೆ ನುಪುರ್ ಶರ್ಮಾ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಬಿಜೆಪಿಯ ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಪ್ರಾಯಗಳು ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಕಾರಣ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ತದನಂತರ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯ ವಿರುಧ್ದ ತನ್ನ ದಾಳಿಯನ್ನು ತೀವ್ರಗೊಳಿಸಿವೆ. ಬಿಜೆಪಿಯ ವಕ್ತಾರೆಯ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಧಕ್ಕೆ ತಂದಿದೆ.ಆದುದರಿಂದ ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದೆ.
ಪ್ರಸ್ತುತ ಘಟನೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಬಿಜೆಪಿಯ ಲಜ್ಜೆಗೆಟ್ಟ ಮತಾಂಧತೆ ಭಾರತಕ್ಕೆ ವಿಶ್ವದ ಮುಂದೆ ಇದ್ದ ಬಧ್ದತೆಗೂ ಧಕ್ಕೆ ತಂದಿದೆ”ಎಂದು ಟೀಕಿಸಿದ್ದರು.
ಈ ಘಟನೆಯ ನಂತರ ಹದಿನೈದಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳು ಭಾರತೀಯ ರಾಯಭಾರಿಗೆ ತನ್ನ ಅಧಿಕ್ರತ ಆಕ್ರೋಶ ಮತ್ತು ಖಂಡನೆ ಸಲ್ಲಿಸಿತ್ತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ ಬಿಜೆಪಿ ವಕ್ತಾರೆ ನುಪುರ್ ಶರ್ಮಾ ಮತ್ತು ನವೀನ್ ಜಿಂದಾಲರನ್ನು ಈ ಕೂಡಲೇ ಬಂಧಿಸಿ ಜೈಲಿಗಟ್ಟಿ:ಕಾಂಗ್ರೆಸ್ ಒತ್ತಾಯ
