Latest Posts

ಕಾಂಗ್ರೆಸ್ ಗೆ ಮರಳುತ್ತಿರುವ ಬಿಜೆಪಿ ಕಾರ್ಯಕರ್ತರು

ಮುಲ್ಕಿ: ಮಾಜಿ ಸಚಿವ ಅಭಯಚಂದ್ರ ಜೈನ್ ಸಮ್ಮುಖದಲ್ಲಿ ಸುಮಾರು 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.ಪಕ್ಷಿಕೆರೆ ಸಮಿಪದ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೆಮ್ರಾಲ್ ನಲ್ಲಿ ಈ ಘಟನೆ ನಡೆದಿದೆ.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ದೇಶದಲ್ಲಿ ಬಡವರಿಗೆ ಶಕ್ತಿ ನೀಡಿದ್ದು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಕಾಂಗ್ರೆಸ್ ಪಕ್ಷ ವಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಡವರ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈಗಿನ ಬಿಜೆಪಿ ಸರಕಾರ ಮೂರು ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ ಎಂದು ಹೇಳಿದರು. ಕೊರೋನಾ ಮಹಾಮಾರಿ ಯಿಂದ ಇಡೀ ದೇಶಕ್ಕೆ ದೇಶವೇ ತತ್ತರಿಸುತ್ತಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಐಷಾರಾಮಿ ಜೀವನ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು. ದ. ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ 2000 ಕೋಟಿ ಕೋರೋನ ಹಗರಣದಲ್ಲಿ ಭಾಗಿಯಾಗಿದ್ದು ಈ ಬಗ್ಗೆ ತನಿಖೆ ನಡೆದರೆ ಬಿಜೆಪಿ ನಾಯಕರು ಜೈಲಿಗೆ ಹೋಗುವುದು ನಿಶ್ಚಿತ. ಚುನಾವಣೆ ಬರುವಾಗ ಬಿಜೆಪಿ ಪಕ್ಷ ಹಿಂದುತ್ವದ ಅಜೆಂಡಾವನ್ನು ಸೃಷ್ಟಿ ಮಾಡಿಸಿಕೊಂಡು ಜನರ ನಡುವೆ ಹೊಡೆದಾಟ ಮಾಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಈಗಿನ ಬಿಜೆಪಿ ಸರಕಾರದ ಶಾಸಕರು ಅಲ್ಲಲ್ಲಿ ಕಾಮಗಾರಿಗೆ ಚಾಲನೆ ನೀಡಿ ತಮ್ಮ ಸಾಧನಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನ ಗುರುತಿಸಿದ್ದು ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಮ್ರಾಲ್ ಮಾಜೀ ಪಂಚಾಯತ್ ಸದಸ್ಯ ಮಯ್ಯದ್ದಿ ಮಾತನಾಡಿ ಈ ಬಾರಿ ಕೆಮ್ರಾಲ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು ಬಿಜೆಪಿ ಅಕುಟಿಲ ರಾಜಕೀಯಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಮ್ರಾಲ್ ,ಅತ್ತೂರು, ಕೊಯಿಕೊಡೆ ವ್ಯಾಪ್ತಿಯ ಸುಮಾರು ಮೂವತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಸಭೆಯಲ್ಲಿ ಕೆಮ್ರಾಲ್ ವಲಯದ ಕಾಂಗ್ರೆಸ್ ನಾಯಕರಾದ ಅಶ್ವಿನ್ ಆಳ್ವ, ಪ್ರವೀಣ್ , ಜಗನ್ನಾಥ ಶೆಟ್ಟಿ, ರೇವತಿ, ಶ್ರೀಧರ್ ಪಂಜ, ಜಾಕ್ಸನ್ ಪಕ್ಷಿಕೆರೆ, ಲೀಲಾ ಪೂಜಾರಿ,ರಾಷ್ಟ್ರೀಯ ಎನ್ ಎಸ್ ಯು ಐ ನ ಅರ್ ಟಿ ಐ ಸೆಲ್ ನ ಸಂಯೋಜಕರಾದ ಅನ್ವಿತ್ ಕಟೀಲ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ರಕ್ಷಿತ್ ಕೊಳಚಿಕಂಬಳ ಮತ್ತಿತರರು ಉಪಸ್ಥಿತರಿದ್ದರು.