ಬೆಂಗಳೂರು: ಹಿಜಾಬ್ ವಿಷಯವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಅವರು ಹಿಜಾಬ್ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಸರಕಾರ ತರಾತುರಿಯಲ್ಲಿ ಹೊಸ ಸಮವಸ್ತ್ರ ನೀತಿಯನ್ನು ಹೊರಡಿಸುವುದರ ಹಿಂದಿರುವ ದುರುದ್ದೇಷ ಏನು ಎಂದು ಸರಕಾರವನ್ನು ಪ್ರಶ್ನಿಸದರಲ್ಲದೆ, ನ್ಯಾಯಲಯದ ತೀರ್ಪು ಬರುವವರೆಗೆ ಈ ಹಿಂದಿನ ಸಮವಸ್ತ್ರ ಪದ್ದತಿ ಮುಂದುವರಿಯಲಿ ಎಂದು ಹೇಳಿದ್ದರು.
ಮುಂದುವರಿದು ಸಂಸದ ಪ್ರತಾಪ್ ಸಿಂಹ ಅವರ ಹಿಜಾಬ್ ಮುಖ್ಯವಾ ಕಿತಾಬ್ ಮುಖ್ಯವಾ ಎಂಬ ವಿವಾದಾತ್ಮಕ ಹೇಳಿಕೆಯ ವಿರುದ್ಧ ವಾಗ್ದಾಳಿ ಮಾಡಿದ ಖಾದರ್ ಅವರು ಇವರಿಗೆ ತಂದೆ ಮುಖ್ಯವಾ ತಾಯಿ ಮುಖ್ಯವಾ ಎಂದು ಕೇಳಿದರೆ ಹೇಗೆ? ನಮಗೆ ಎರಡೂ ಮುಖ್ಯ, ಶಿಕ್ಷಣವು ಮುಖ್ಯ, ದೇವರ ಭಯವೂ ಮುಖ್ಯ. ದೇವರ ಭಯ ಇರುವವರು ಉತ್ತಮ ಶಿಕ್ಷಣ ಪಡೆದು ದೇಶದ ಒಳ್ಳೆಯ ಪ್ರಜೆಗಳಾಗುತ್ತಾರೆ. ದೇವರ ಭಯ ಇಲ್ಲದವರು ಶಿಕ್ಷಣ ಪಡೆದರೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಚಾಳಿ ಮುಂದುವರಿಸುತ್ತಾರೆ.
ಇವತ್ತು ಹಿಜಾಬ್ ಮತ್ತು ಕಿತಾಬ್ ಎರಡೂ ಮುಖ್ಯ ಎಂದು ಹೇಳಿದರು.
ಇದನ್ನೇ ತಿರುಚಿ ವರದಿ ಮಾಡಿದ ವಿಶ್ವಸಮಾಚಾರ್ ಎನ್ನುವ ವೆಬ್ ಪೋರ್ಟಲ್ ಒಂದು ನ್ಯಾಯಲಯದ ತೀರ್ಪು ಬರುವವರೆಗೆ ಹಿಜಾಬ್ ಬೇಡ ಸಮವಸ್ತ್ರ ಪದ್ದತಿ ಇರಲಿ ಎಂದು ಯು.ಟಿ.ಖಾದರ್ ಹೇಳಿದ್ದಾರೆ ಎಂಬ ತಲೆಬರಹ ನೀಡಿ ವರದಿ ಮಾಡಿತ್ತು, ಈ ಬಗ್ಗೆ ಯು.ಟಿ.ಖಾದರ್ ಅವರ ಮಾಧ್ಯಮ ಹೇಳಿಕೆಯನ್ನು ಪರಿಶೀಲಿಸಿದಾಗ ಅವರು ಹಿಜಾಬ್ ಪರವಾಗಿ ಸರಕಾರವನ್ನು, ಸರಕಾರ ಹೊರಡಿಸಿದ ಸಮವಸ್ತ್ರ ನೀತಿಯನ್ನು ಪ್ರಶ್ನಿಸಿದ್ದಾರೆಯೇ ವಿನಹ ಎಲ್ಲೂ ಹಿಜಾಬ್ ಬೇಡ ಎಂಬ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಕೋರ್ಟ್ ತೀರ್ಪು ಬರುವ ತನಕ ‘ಹಿಜಾಬ್’ ಬೇಡ ಸಮವಸ್ತ್ರ ಪದ್ದತಿ ಇರಲಿ ಎಂಬ ತಲೆಬರಹದಡಿ ಸುಳ್ಳು ಸುದ್ದಿ
ನ್ಯಾಯಲಯದ ತೀರ್ಪು ಬರುವವರೆಗೆ ಈ ಹಿಂದಿನ ಸಮವಸ್ತ್ರ ಪದ್ದತಿಯೇ ಮುಂದುವರಿಯಲಿ ಎಂಬ ಯು.ಟಿ.ಖಾದರ್ ಅವರ ಹೇಳಿಕೆಯನ್ನು ತಿರುಚಿ ವರದಿ.
ಸುಳ್ಳು ಸುದ್ದಿ ವರದಿ ಮಾಡಿದ ವೆಬ್ ಪೋರ್ಟಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಯುಟಿಕೆ ಆಪ್ತರು.
