ಮೈಸೂರು: ಹಿಜಾಬ್ ವಿಚಾರದಲ್ಲಿ ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರು ಶಾಲಾ ಕಾಲೇಜಿಗೆ ಏಳು ದಿನ ರಜೆ ಘೋಷಿಸಿದ್ದು ಸರಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು. ನ್ಯಾಯಲಯ ತೀರ್ಪು ನೀಡುವವರೆಗೂ ಹಳೆ ಪದ್ದತಿ ಮುಂದುವರಿಸಲಿ. ಈ ದೇಶದ ಸಂಸ್ಕ್ರತಿ, ಪಧ್ದತಿ ಮುಂತಾದ ಎಲ್ಲಾ ವಿಚಾರಗಳನ್ನು ನ್ಯಾಯಲಯದಲ್ಲೇ ಬಗೆಹರಿಸಲು ಸಾಧ್ಯವಿಲ್ಲ. ನ್ಯಾಯಲಯದ ಹೊರಗಡೆ ಸಮಾಜದ ಮುಖಂಡರು ಒಟ್ಟಿಗೆ ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಸರಕಾರಕ್ಕೆ ಕಿವಿ ಮಾತು ಹೇಳಿದರು.
ಇಷ್ಟು ವರ್ಷದಲ್ಲಿ ಶಿರವಸ್ತ್ರ ಹಾಕಿಕೊಂಡು ಬಂದಾಗ ಇರದ ಸಮಸ್ಯೆ ಇವತ್ತು ಒಮ್ಮೆಲೆ ಶಿರವಸ್ತ್ರ ತೆಗೆಯಲು ಮುಂದಾಗಿರುವುದು ಸರಿಯಲ್ಲ. ಶಿರವಸ್ತ್ರ ಧರಿಸುವುದು ಸಂವಿಧಾನತ್ಮಕ ಹಕ್ಕಾಗಿದೆ, ಸಮಾನತೆ ಶಿರವಸ್ತ್ರ ಕ್ಕೆ ಮಾತ್ರ ಯಾಕೆ? ಸಮಾನತೆ ಎನ್ನುವವರು ಶಾಲಾ ಶುಲ್ಕದಲ್ಲಿ ಯಾಕೆ ಸಮಾನತೆ ತರುತ್ತಿಲ್ಲ? ಕೆಲವರು ಸ್ಕೂಟರ್ ನಲ್ಲಿ ಬಂದರೆ ಇನ್ನು ಕೆಲವರು ಸ್ಕೂಲ್ ಬಸ್ ನಲ್ಲಿ ಬರುತ್ತಾರೆ. ಒಬ್ಬ ವಿಧ್ಯಾರ್ಥಿ ದುಬಾರಿ ಬ್ಯಾಗ್, ಇನ್ನೊಬ್ಬ ವಿಧ್ಯಾರ್ಥಿ ಮಾಮೂಲಿ ಬ್ಯಾಗ್, ಏನೂ ಇಲ್ಲದವರು ಪ್ಲಾಸ್ಟಿಕ್ ಕವರ್ ಸುತ್ತುಕೊಂಡು ಬರುತ್ತಾರೆ. ಅಲ್ಲಿ ಸಮಾನತೆ ಬೇಡವೇ? ಸಮಸ್ಯೆ ಇಲ್ಲದಿದ್ದಾಗ ಏಕೆ ಸಮಸ್ಯೆ ಉಂಟು ಮಾಡುತ್ತೀರಾ?
ಶಿಕ್ಷಣ ಕೊಡುವುದು ಸರಕಾರದ ಕರ್ತವ್ಯವೇ ಹೊರತು ಶಿಕ್ಷಣಕ್ಕೆ ಗೇಟ್ ಹಾಕುವುದಲ್ಲ. ಕಾನೂನು ಮತ್ತು ಸಂವಿಧಾನ ಹಿಜಾಬಿಗೆ ಸಂಬಂಧಿಸಿದಂತೆ ಇಷ್ಟು ವರ್ಷ ಅವಕಾಶ ನೀಡಿರುವಾಗ ಒಮ್ಮೆಲೆ ಸರಕಾರ ಸಮಾನತೆ ವಿಚಾರ ಅಂತ ಹೇಳಿ ಹಿಜಾಬಿಗೆ ತಡೆ ತರಲು ಹೋಗಿದ್ಯಾಕೆ.?
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಯಾವುದೇ ಹೆಸರಿಟ್ಟರೂ ಅದು ಟಿಪ್ಪುನೇ. ಟಿಪ್ಪುವಿನ ಕೊಡುಗೆ, ಅದೇ ರೀತಿ ಒಡೆಯರ್ ಕೊಡುಗೆಯನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಅದು ಈ ದೇಶದ ಇತಿಹಾಸ, ಸಂಸ್ಕೃತಿ ಕೊಟ್ಟಂತಹ ಕೊಡುಗೆ. ಪ್ರತಾಪ ಸಿಂಹ ಸಂಸದನಾದ ಮೇಲೆ ಏನೇನು ಅಭಿವ್ರದ್ದಿ ಮಾಡಿದ್ದಾರೆ?ಎಷ್ಟು ಹೊಸ ಟ್ರಾಕ್, ಹೊಸ ರೈಲು, ಹೊಸ ಜಂಕ್ಷನ್ ತಂದಿದ್ದಾರೆ?ಯಾವುದೇ ಅಭಿವೃದ್ಧಿ ಮಾಡದ ಪ್ರತಾಪ ಸಿಂಹ ಹೆಸರು ಬದಲಾವಣೆಯಲ್ಲೇ ತಲ್ಲೀಣರಾಗಿದ್ದಾರೆ.
ಶಾಸಕ ರಘುಪತಿ ಭಟ್ಟರಿಗೆ ಟಾಂಗ್ ಕೊಟ್ಟು ಮಾತನಾಡುತ್ತಾ ಯಾರೂ ಯಾರಿಗೂ ಬೆದರಿಕೆ ಹಾಕಬಾರದು. ಅದೇ ಸಮಯ
ಜನಪ್ರತಿನಿಧಿಗಳೆನಿಸಿಕೊಂಡವರು ಸಮಸ್ಯೆಗೆ ಪರಿಹಾರ ಕಂಡು ಹುಡುಕಬೇಕೇ ಹೊರತು ಪರಿಹಾರದಲ್ಲಿ ಸಮಸ್ಯೆ ಕಂಡುಹುಡುಕುವುದಲ್ಲ. ಒಟ್ಟಾರೆಯಾಗಿ ಸಮಾಜಕ್ಕೆ ಹಿತಕರವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಉಡುಪಿ ಶಾಸಕರಿಗೆ ಕಿವಿಮಾತು ಹೇಳಿದರು.
ಸಮಾನತೆಗಾಗಿ ಸಮವಸ್ತ್ರ ನೀತಿ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ವಿರುಧ್ದ ಯುಟಿ ಖಾದರ್ ವಾಗ್ದಾಳಿ
ಶಿಕ್ಷಣ ಕೊಡುವುದು ಸರಕಾರದ ಪ್ರಾಥಮಿಕ ಕರ್ತವ್ಯವೇ ಹೊರತು, ಗೇಟ್ ಹಾಕುವುದಲ್ಲ
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿ ಟಿಪ್ಪು ಕೊಡುಗೆಯನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ
ಹಿಜಾಬ್ ಮುಖ್ಯವೋ, ಕಿತಾಬ್ ಮುಖ್ಯವೋ ಎಂದು ಪ್ರಶ್ನಿಸುವವರು ಮೂರ್ಖರು.!
