Latest Posts

ಭಾರತೀಯ ಮುಸಲ್ಮಾನರ ಧಾರ್ಮಿಕ,ರಾಜಕೀಯ, ಸಾಮಾಜಿಕ ಪ್ರಶ್ನಾತೀತ ನಾಯಕ ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಙಲ್ ವಿಧಿವಶ

ದೆಹಲಿ: ಭಾರತೀಯ ಮುಸಲ್ಮಾನರ ಪ್ರಶ್ನಾತೀತ ನಾಯಕ,ಮುಸ್ಲಿಂ ಲೀಗಿನ ಸಾರಥಿ, ಭಾರತದ ಅತೀ ದೊಡ್ಡ ಉಲಮಾ ಒಕ್ಕೂಟದ ಸಮಸ್ತದ ಉಪಾಧ್ಯಕ್ಷರಾಗಿ ಸುನ್ನತ್ ಜಮಾಹತಿನ ವಿವಿಧ ಸಂಘ ಸಂಸ್ಥೆಗಳ ಪೋಷಕ,ಸಾವಿರಾರು ಮೊಹಲ್ಲಾಗಳ ಖಾಝಿಯಾಗಿ,ಸಾಮಾಜಿಕ,ಸಾಂಸ್ಕೃತಿಕ ,ಶೈಕ್ಷಣಿಕ ಕ್ಷೇತ್ರದ ಮುಂಚೂಣಿ ನೇತಾರ,ಸೌಹಾರ್ಧತೆಯ ಹರಿಕಾರ,ಸಯ್ಯಿದ್ ಕುಟುಂಬದ ಅಗ್ರಗಣ್ಯ ತಾರೆ ,ಕೊಡಪ್ಪಣಕ್ಕಲ್ ತರವಾಡಿನ ಸುಪುತ್ರ ,ಅಜಾತ ಶತ್ರು ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ (74) ರವರು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಅಂಗಮಾಲಿ ಲಿಟ್ಲ್ ಫ್ಲವರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತ್ನಿ ಕೊಯಿಲಾಂಡಿ ಅಬ್ದುಲ್ಲಾ ಬಾಫಕಿಯವರ ಪುತ್ರಿ ಶರೀಫಾ ಫಾತಿಮಾ ಸುಹ್ರಾ. ಮಕ್ಕಳು: ಅವಳಿ ಸಹೋದರರಾದ ಸಾಜಿದಾ-ವಾಹಿದಾ, ನಯೀಮ್ ಅಲಿ ಶಿಹಾಬ್ ಮತ್ತು ಮುಯಿನ್ ಅಲಿ ಶಿಹಾಬ್. ಅಳಿಯ: ನಿಯಾಜ್ ಅಲಿ ಜಿಫ್ರಿ ಕೋಝಿಕ್ಕೋಡ್, ಹಬೀಬ್ ಸಖಾಫ್ ತಿರೂರು. ಒಡಹುಟ್ಟಿದವರು: ಸಾದಿಕಲಿ ಶಿಹಾಬ್ ತಂಗಳ್ (ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ), ಅಬ್ಬಾಸಲಿ ಶಿಹಾಬ್ ತಂಗಳ್ (ಎಸ್ ಕೆಎಸ್ ಎಸ್ ಎಫ್ ರಾಜ್ಯಾಧ್ಯಕ್ಷ), ಮುಲ್ಲಾ ಬೀವಿ, ದಿವಂಗತ ಮುಹಮ್ಮದಲಿ ಶಿಹಾಬ್ ತಂಗಳ್, ಉಮರ್ ಅಲಿ ಶಿಹಾಬ್ ತಂಗಳ್, ಖದೀಜಾ ಬೀ ಕುಂಞಿ ಬೀವಿ. ಸಿ ಎಚ್ ಕಾರಮೇಲ್ ರನ್ನು ಅಗಲಿದ್ದಾರೆ.