Latest Posts

ಸರಕಾರಕ್ಕೆ ಧಮ್ ಇದ್ದರೆ ಸಮಾಜದ ಶಾಂತಿ ಕದಡುವ ಎಸ್ಡಿಪಿಐ, ಆರೆಸ್ಸೆಸ್, ಭಜರಂಗದಳ, ಎಐಎಂಐಎಂ ಗಳನ್ನು ನಿಷೇಧ ಮಾಡಿ- ಸಿದ್ದರಾಮಯ್ಯ ಸವಾಲು

ಹುಬ್ಬಳ್ಳಿ: ಶುಕ್ರವಾರ ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಗಲಭೆಗಳ ಹಿಂದೆ ಸಂಘಟನೆಗಳ ಕೈವಾಡವಿದ್ದರೆ ಅವುಗಳ ಮೇಲೆ ರಾಜ್ಯ ಸರಕಾರ ನಿಷೇಧ ಹೇರಲಿ, ಬೇಡ ಎಂದವರು ಯಾರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸರಕಾರಕ್ಕೆ ನೈತಿಕತೆ ಇದ್ದರೆ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು, ಎಸ್ಡಿಪಿಐ, ಆರೆಸ್ಸೆಸ್, ಭಜರಂಗದಳ, ಎಐಎಂಐಎಂ ಗಳನ್ನು ನಿಷೇಧ ಮಾಡಿ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಾಂತಿ, ಸೌಹಾರ್ದತೆಯ ಕಾಪಾಡುವುದು ಗೃಹ ಇಲಾಖೆಯ ಕೆಲಸ. ಆದರೆ ಆ ಇಲಾಖೆಯ ಸಚಿವರೇ ಸಮಾಜದ ಶಾಂತಿ ಭಂಗ ಮಾಡುತ್ತಿದ್ದಾರೆ. ರಾಜಿನಾಮೆ ಕೊಟ್ಟು ಹೋಗಲಿ ಎಂದು ಒತ್ತಾಯಿಸಿದರು.