Latest Posts

ದೇಶದಲ್ಲಿ 24 ಗಂಟೆಗಳಲ್ಲಿ 38,792 ಜನರಿಗೆ ಕೋವಿಡ್; 624 ಸಾವು

ಬೆಂಗಳೂರು: 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 38,792 ಜನರಿಗೆ ಕೋವಿಡ್ ದೃಡಪಡಿಸಿದ್ದಾರೆ. ಕೋವಿಡ್ ಸೋಂಕಿನಿಂದ 624 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ, ದೇಶದಲ್ಲಿ 4.28 ಲಕ್ಷ ರೋಗಿಗಳಿದ್ದಾರೆ.

ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3.1 ಕೋಟಿ ದಾಟಿದೆ. ಕೋವಿಡ್ ಸಾವಿನ ಸಂಖ್ಯೆ 4.11 ಲಕ್ಷಕ್ಕೆ ಏರಿದೆ ಕೇರಳದಲ್ಲಿ ನಿನ್ನೆ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. 14,539 ಪ್ರಕರಣಗಳು ವರದಿಯಾಗಿವೆ. ಎರಡನೆಯದಾಗಿ ಮಹಾರಾಷ್ಟ್ರದಲ್ಲಿ 7,243 ಕೋವಿಡ್ ಪ್ರಕರಣಗಳು ವರದಿಯಾಗಿವೆ.