Latest Posts

ಗೂಡಿನಬಳಿ ವಲಯ ಕಾಂಗ್ರೆಸ್ ಘಟಕದ ವತಿಯಿಂದ ಸ್ವಾತಂತ್ರ್ಯೊತ್ಸವ ಆಚರಣೆ

ಬಂಟ್ವಾಳ: ಗೂಡಿನಬಳಿ ವಲಯ ಕಾಂಗ್ರೆಸ್ ವತಿಯಿಂದ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಮಸ್ಜಿದೇ ಮುತ್ತಲಿಬ್ ರಸ್ತೆಯ ಜಿಕೆ ಮುಹಮ್ಮದ್ ಬೀಡಿ ಬ್ರಾಂಚ್ ನ ಮುಂದುಗಡೆ ಆಚರಿಸಲಾಯಿತು.

ಗೂಡಿನಬಳಿ ವಲಯ ಕಾಂಗ್ರೆಸ್ ಗೌರವಾಧ್ಯಕ್ಷರಾದ ಚಾಚಾ ಖಾದರ್ ರವರು ಬೆಳಗ್ಗೆ 8.15 ಕ್ಕೆ ಧ್ವಜಾರೋಹಣ ನೆರವೇರಿಸಿದರು.

ಮಸ್ಜಿದೇ ಮುತ್ತಲಿಬ್ ಹಾಲಿ ಅಧ್ಯಕ್ಷರಾದ ಮಜೀದ್, ಮಾಜಿ ಅಧ್ಯಕ್ಷರಾದ ಜಿಕೆ ಮೊಹಮ್ಮದ್, ಜಿ ಎನ್ ಮುಹಮ್ಮದ್, ಮಾಜಿ ಕಾಂಗ್ರೆಸ್ ವಲಯಾಧ್ಯಕ್ಷರಾದ ಕರೀಂ ಸುಪಾರಿ ,ಕಟ್ಟಡ ಮಾಲಿಕರಾದ ಜಿಕೆ ಮೊಹಮ್ಮದ್, ಜಿಕೆ ಅಬೂಬಕ್ಕರ್, ಕರೀಂ ಅರಫಾ,ಇಸ್ಮಾಯಿಲ್, ಕರೀಂ ಬಿಸ್ಮಿಲ್ಲಾ ಹೋಟೆಲ್, ಆಸೀಫ್, ಅದ್ದಾಕ, ಪೇಲಿಸ, ಸುಲೈಮಾನ್ ಎಂಕೆ, ಜಿಕೆ ಸುಲೈ, ಬಶೀರ್ ಟ್ಯಾಂಕರ್ ಹಾಗೂ ಅನೇಕ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.

ವಲಯಾಧ್ಯಕ್ಷರಾದ ಟಿ.ರಝಾಕ್, ಬೂತ್ ಅಧ್ಯಕ್ಷರಾದ ಖಾಸಿಂ ಎಂಕೆ, ಸತ್ಯನಾರಾಯಣ ರಾವ್, ಯುವ ಅಧ್ಯಕ್ಷರಾದ ಅಮೀನ್ ಹಾಗೂ ಪದಾಧಿಕಾರಿಗಳಾದ ರಿಝ್ವಾನ್, ಫ್ರಾನ್ಸಿಸ್, ದೀಪಕ್ ಕಿನ್ನಿ, ಅಶ್ಫಾಕ್ ಜಿಕೆ, ರಹೀಂ ಕೈಕುಂಜೆ, ಮೊಹಮ್ಮದ್, ಉಸ್ಮಾನ್, ಅಲೀಂ, ಮುಸ್ತ ಡ್ರೀಮ್ಸ್,ರಿಝ್ವಾನ್ ಜಿಕೆ ,ಸಂಶೀರ್ ಜಿಕೆ,ಮುನ್ನ,ಹನೀಫ್ ಟಿಪ್ಪುನಗರ,ಉಬೈದುಲ್ಲಾ,ಸತ್ತಾರ್,ತೌಸೀಫ್,ತೌಸೀಫ್ ಮಿಲನ್, ಅಮ್ಮಿ, ಸಾದಿಕ್ ಹಾಗೂ ಅನೇಕರು ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಇಸ್ರಾರ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು.