Latest Posts

ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ ಸೌದಿ ಅರೇಬಿಯ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಾರಾಟ ಮಾಡುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ.

ಆಮದು ಸೇರಿದಂತೆ ಮಾಂಸಕ್ಕೆ ಸಂಬಂಧಿಸಿದ ಎಲ್ಲಾ ಆಹಾರ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣ ಕಡ್ಡಾಯವಾಗಿದೆ. ಹಲಾಲ್ ಸೂಚಿಸಿದ ಲೋಗೋ ಅಥವಾ ಗುರುತು ಪ್ರಮಾಣೀಕರಣಕ್ಕೆ ಪರಿಗಣಿಸಲಾಗುವುದಿಲ್ಲ.

ಬದಲಾಗಿ, ದೇಶದಲ್ಲಿ ಪರವಾನಗಿ ಪಡೆದ ಉತ್ಪನ್ನಗಳನ್ನು ಮಾನ್ಯತೆ ಪಡೆದ ಹಲಾಲ್ ಏಜೆನ್ಸಿಗಳಿಂದ ಪ್ರಮಾಣೀಕರಿಸಲಾಗುತ್ತದೆ. ಇದು ಎಲ್ಲಾ ಸ್ಥಳೀಯ ಅಥವಾ ಆಮದು ಮಾಡಿದ ಆಹಾರ ಉತ್ಪನ್ನಗಳಿಗೆ ಅನ್ವಯಿಸುತ್ತದೆ.

ಹಲಾಲ್ ಪ್ರಮಾಣೀಕರಣದ ಅಗತ್ಯವಿರುವ ಆಹಾರ ಉತ್ಪನ್ನಗಳ ಪಟ್ಟಿಯನ್ನು ಪ್ರಾಧಿಕಾರ ಬಿಡುಗಡೆ ಮಾಡಿದೆ. ಜಿಲಾಟಿನ್, ಕಾಲಜನ್ ಮತ್ತು ವಿವಿಧ ರೀತಿಯ ಚೀಸ್‌ಗಳನ್ನು ತಯಾರಿಸುವ ಪ್ರಾಣಿಗಳ ರೆನ್ನೆಟ್, ಪ್ರಾಣಿ ತೈಲ ಮತ್ತು ಕೊಬ್ಬಿನಂತಹ ಆಹಾರ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವು ಕಡ್ಡಾಯವಾಗಿದೆ.

ಜುಲೈ 1ರಿಂದ ಈ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.