Latest Posts

ಬಿಸಿಲ ಬೇಗೆಗೆ ತತ್ತರಿಸಿದ ಕುವೈತ್ ನ ನವಾಸಿಬ್ ನಗರ

ಜಗತ್ತಿನಲ್ಲೇ ಅತೀ ಹೆಚ್ಚು ಬಿಸಿಲಿನ ತಾಪಮಾನದ ದಾಖಲೆಗೆ ಕುವೈತ್ ಸಾಕ್ಷಿಯಾಗಿದೆ.

ಆಯಾ ದೇಶಗಳ ಹವಮಾನ ಕೇಂದ್ರಗಳಿಂದ ತಾಪಮಾನದ ಡೇಟಾವನ್ನು ಸಂಗ್ರಹಿಸುವ ಅಮೇರಿಕಾದ ಎಲ್ ಡೊರಾಡೋ ವೆದರ್ ನ ಪ್ರಕಾರ ಕುವೈತ್ ವಿಶ್ವದಲ್ಲೇ ಅತೀ ಹೆಚ್ಚು ತಾಪಮಾನವನ್ನು 53.2° ದಾಖಲಿಸಿದೆ.

ಕುವೈತ್ ನ ನಗರವಾದ ನವಾಸಿಬ್ 53.2° ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವನ್ನು ದಾಖಲಿಸಿದ್ದು,ಇದು 2021 ರ ಈ ವರ್ಷದಲ್ಲಿ ಜಗತ್ತಿನಲ್ಲಿಯೇ ಅತೀ ಹೆಚ್ಚಿನ ತಾಪಮಾನದ ದಾಖಲೆಯನ್ನು ಹೊಂದಿತು.
ಏತನ್ಮಧ್ಯೆ ಇರಾನ್ ನ ಅಹ್ವಾಸ್ ಮತ್ತು ಅಲ್ ಅಮಿಡಿಯಾ ತಲಾ 50.1° ಹಾಗೂ ಕುವೈತ್ ನ ಜಹ್ರಾದಲ್ಲಿ 49.7° ನಷ್ಟು ದಾಖಲಾಗಿದೆ.

ಒಂದು ತಿಂಗಳ ಒಳಗೆ ಇದು ಎರಡನೇ ಭಾರಿಗೆ ಕುವೈತ್ ಅತೀ ಹೆಚ್ಚು ಅಧಿಕೃತ ತಾಪಮಾನದ ದಾಖಲಾದ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿದೆ.
ಅಲ್ ರೈ ದೈನಂದಿನ ವರದಿ ಪ್ರಕಾರ ಕುವೈತ್ ಮತ್ತು ದೋಹಾ ವಿಶ್ವಾದ್ಯಂತ 143 ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.